ಸಾರಾಂಶ
ರೋಣ: ಕಳೆದ 25 ವರ್ಷಗಳಿಂದ ಆಝಾದ ಯುವ ಸಂಘ ಕೈಗೊಳ್ಳುತ್ತಾ ಬಂದಿರುವ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ಪಟ್ಟಣದ ಹೊಸ ಸಂತೆ ಬಜಾರದಲ್ಲಿ ಆಝಾದ ಯುವಕ ಸಂಘದಿಂದ ಸಿರತುನ್ನಬಿ ಜನ್ಮದಿನೋತ್ಸವ ಹಾಗೂ ಆಝಾದ ಯುವಕ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮೋತ್ಸವ ಸಮಾರಂಭದಲ್ಲಿ ಮಾತನಾಡಿದರು.ಅಝಾದ್ ಯುವಕ ಸಂಘ ವರ್ಷದುದ್ದಕ್ಕೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೇ ಸರ್ವ ಧರ್ಮ ಒಗ್ಗೂಡಿಸಿಕೊಂಡು ಸರ್ವ ಧರ್ಮ ಸಾಮೂಹಿಕ ವಿವಾಹ ನಡೆಸುತ್ತಾ ಬಂದಿದ್ದಾರೆ. ನಿಮ್ಮ ಕಾರ್ಯಕ್ಕೆ ನನ್ನ ಪ್ರೋತ್ಸಾಹ ಸದಾ ಇರುತ್ತದೆ. ಸಂಘಟನೆಯು ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮ ಮಾಡುತ್ತ ಉತ್ತರೋತ್ತರವಾಗಿ ಬೆಳೆಯಲಿ. ಜೀವನದ ಮುಖ್ಯ ಘಟ್ಟವೆಂದರೆ ಅದು ದಾಂಪತ್ಯ ಜೀವನವಾಗಿದ್ದು ಸತಿ ಪತಿಯರು ಹೊಂದಾಣಿಕೆಯಿಂದ ಜೀವನ ನಡೆಸಿದರೆ ಇಡೀ ಕುಟುಂಬ ಸಂತಸದಿಂದ ಇಡಲು ಸಾಧ್ಯ. ಆದರ್ಶ ದಂಪತಿಗಳಾಗಿ ಜೀವನ ನವ ವಧು ವರರು ನಡೆಸಬೇಕು. ತಂದೆ ತಾಯಿ ಅತ್ತೆ ಮಾವನವರನ್ನು ನೋಡಿಕೊಳ್ಳುವ ಮೂಲಕ ಆದರ್ಶ ದಂಪತಿಗಳಾಗಿ ಜೀವನ ನಡೆಸುವಲ್ಲಿ ಮುಂದಾಗಬೇಕು ಎಂದರು.
ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಮಾತನಾಡಿ, ನಾವೆಲ್ಲರು ಸೇರಿ ಜೀವನ ಮಾಡಬೇಕು, ದೇಶದ ಅಭಿವೃದ್ಧಿಗಾಗಿ ಶ್ರಮಿಸೋಣ, ದೇಶದ ಅಭಿವೃದ್ಧಿಗೆ ಎಲ್ಲ ಧರ್ಮದ ಕೊಡುಗೆ ಅಪಾರವಾಗಿದೆ. ಒಬ್ಬ ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಮನೆಗೆ ಬೆಳಕಾಗಿ ಇರುತ್ತಾಳೆ. ಶೈಕ್ಷಣಿಕ ಅಭಿವೃದ್ಧಿ ದೇಶದಲ್ಲಿ ಆಗಬೇಕಿದೆ ದೇಶ ಉದ್ಧಾರಕ್ಕೆ ಸಾಮರಸ್ಯತೆ ಅತೀ ಮುಖ್ಯವಾಗಿದೆ. ಭಾರತ ಎಲ್ಲ ಜಾತಿಯವರು ಹೊಂದಾಣಿಕೆಯಿಂದ ಇರುವ ದೇಶ ನಮ್ಮದು. ಶತ ಶತಮಾನಗಳಿಂದ ನಾವೆಲ್ಲರೂ ಯಾವ ರೀತಿಯಾಗಿ ನಡೆದುಕೊಂಡು ಬರಲಾಗಿದಿಯೋ ಅದೇ ರೀತಿಯಾಗಿ ಮುಂದೆಯೂ ಜೀವನ ಸಾಗಿಸಬೇಕು. ದೇಶದ ಪರಂಪರೆ ಪ್ರಕಾರ ನಡೆಯಬೇಕು ಎಂದರು.ಹಜರತ್ ಸೈಯದ ನಿಜಾಮುದ್ದಿನ್ ಷಾ ಅರ್ಷಪಿ ಹಾಗೂ ಮನಕವಾಡ-ಹಿರೇವಡ್ಡಟ್ಟಿಯ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಆಶಿರ್ವಚನ ಹಜರತ್ ಸೈಯದ ಸುಲೇಮಾನ ಶಾವಲಿ ಅಜ್ಜನವರು ಆಶೀರ್ವಚನ ನೀಡಿದರು.
ಆಝಾದ ಯುವಕ ಸಂಘದ ಅಧ್ಯಕ್ಷ ಶಫೀಕ ಮೂಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಬೀರ ಪೌಂಡೇಶನ್ ಅಧ್ಯಕ್ಷ ಎಸ್.ಎ. ಕಬೀರ, ಮೋಶಿನ ಕಬೀರ, ಮಿಥುನ.ಜಿ. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಶಫೀಕ ಮೂಗನೂರ ಯೂಶೂಫ ಇಟಗಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ರಜಿಯಾಬೇಗಂ ಕೊಟಬಾಗಿ, ಬುಡ್ನೆಸಾಬ್ ಬೇಟಗೇರಿ, ಕೆ.ಬಿ. ಹರ್ಲಾಪೂರ, ಗದಿಗೆಪ್ಪ ಕಿರೇಸೂರ, ಸಂಜಯ ರಡ್ಡೇರ, ಮೌನೇಶ ಹಾದಿಯನಿ, ಬಾವಾಸಾಬ್ ಬೇಟಗೇರಿ, ಮಾದೇಗೌಡ ಲಿಂಗನಗೌಡ್ರ, ದಾವಲಸಾಬ್ ಬಾಡಿನ, ರಂಗವ್ವ ಭಜಂತ್ರಿ, ನಿಂಬಣ್ಣ ಗಾಣಿಗೇರ, ಭರಮಗೌಡ ಲಿಂಗನಗೌಡ್ರ, ಪುರಸಭೆ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ರಾಜು ಸಾಂಗ್ಲಿಕರ, ಹನಮಂತಪ್ಪ ತಳ್ಳಿಕೇರಿ, ಸಂಗಪ್ಪ ಜಿಡ್ಡಿಬಾಗೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ರೀಯಾಜ ಮುಲ್ಲಾ ಸ್ವಾಗತಿಸಿದರು.