ಸಾರಾಂಶ
ಸ್ವಾಮೀಜಿ ಅವರು ಒಂದು ಸಮಾಜದ ಏಳಿಗೆಗಾಗಿ ಶ್ರಮಿಸಿದವರಲ್ಲ, ಮಾನವರ ಉದ್ಧಾರಕ್ಕೆ ನೆರವಾದವರು ಇಂದು ಒಕ್ಕಲಿಗೆ ಸಮಾಜ, ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಾಡಿರುವ ಅಗಣ್ಯವಾದ ಸೇವಾ ಕಾರ್ಯವೇ ಪ್ರಧಾನವಾಗಿದೆ ಎಂದರು. ಅವರು ಸರ್ವ ಜನರಿಗೆ ಅನುಕೂಲವಾದ ಕಾರ್ಯವನ್ನು ನಿರ್ವಹಿಸಿದ್ದಾರೆಂದು ಶ್ಲಾಘಿಸಿದರು.
- ರಾಜ್ಯ ರೈತ ಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ನಾರಾಯಣ್
ಕನ್ನಡಪ್ರಭ ವಾರ್ತೆ ಬನ್ನೂರುಜ್ಞಾನ ದಾಸೋಹ, ಅಕ್ಷರದಾಸೋಹ, ವಸತಿ ಸೌಕರ್ಯ, ಉನ್ನತ ಶಿಕ್ಷಣದ ಸೌಕರ್ಯ, ಬಡಜನರ ಏಳಿಗೆಗೆ ಕಾರಣೀಭೂತರಾದವರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯ ಕೊಡುಗೆ ಅಪಾರವಾದದ್ದು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ನಾರಾಯಣ್ ಹೇಳಿದರು.
ಪಟ್ಟಣದ ಸಮೀಪದ ಬಿ. ಬೆಟ್ಟಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 11ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮೀಜಿ ಅವರು ಒಂದು ಸಮಾಜದ ಏಳಿಗೆಗಾಗಿ ಶ್ರಮಿಸಿದವರಲ್ಲ, ಮಾನವರ ಉದ್ಧಾರಕ್ಕೆ ನೆರವಾದವರು ಎಂದರು.ಇಂದು ಒಕ್ಕಲಿಗೆ ಸಮಾಜ, ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಾಡಿರುವ ಅಗಣ್ಯವಾದ ಸೇವಾ ಕಾರ್ಯವೇ ಪ್ರಧಾನವಾಗಿದೆ ಎಂದರು. ಅವರು ಸರ್ವ ಜನರಿಗೆ ಅನುಕೂಲವಾದ ಕಾರ್ಯವನ್ನು ನಿರ್ವಹಿಸಿದ್ದಾರೆಂದು ಶ್ಲಾಘಿಸಿದರು.
ಮೇಗಲಕೊಪ್ಪಲಿನ ಶಿವರಾಂ ಮಾತನಾಡಿದರು. ಬೆಟ್ಟಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ಗಳನ್ನು ವಿತರಿಸಲಾಯಿತು. ಎಸ್.ಐ ರಮೇಶ್, ಜಯರಾಂ, ಸತೀಶ, ಕೇಶವಮೂರ್ತಿ, ರಂಗಸ್ವಾಮಿ, ಆನಂದ್, ರವಿ, ಮನು, ನಾಗೇಶ್, ಎಂ.ವಿ. ಕೃಷ್ಣಪ್ಪ ಇದ್ದರು.