ಬಿ.ಸಿ.ರೋಡ್‌: ಬ್ಲಾಕ್ ಕಾಂಗ್ರೆಸ್‌ನಿಂದ ನುಡಿನಮನ ಕಾರ್ಯಕ್ರಮ

| Published : Jul 28 2025, 01:16 AM IST

ಬಿ.ಸಿ.ರೋಡ್‌: ಬ್ಲಾಕ್ ಕಾಂಗ್ರೆಸ್‌ನಿಂದ ನುಡಿನಮನ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ನಿಧನರಾದ ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರು ಅವರಿಗೆ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿನಮನ ಕಾರ್ಯಕ್ರಮ ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಸಂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಇತ್ತೀಚೆಗೆ ನಿಧನರಾದ ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರು ಅವರಿಗೆ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿನಮನ ಕಾರ್ಯಕ್ರಮ ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಸಂಜೆ ನಡೆಯಿತು.

ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ಪಿಯೂಸ್ ಎಲ್.ರೋಡ್ರಿಗಸ್, ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯರಾದ ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಮಾಜಿ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪ್ರಮುಖರಾದ ಪದ್ಮರಾಜ್ ಆರ್.ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ನ್ಯಾಯವಾದಿ ಶೈಲಜಾ, ಕೆ.ಪದ್ಮನಾಭ ರೈ ನುಡಿನಮನ ಸಲ್ಲಿಸಿದರು.ಪಕ್ಷ ಪ್ರಮುಖರಾದ ಮಹಮ್ಮದ್ ನಂದಾವರ, ಅಲ್ಬರ್ಟ್ ಮಿನೇಜಸ್, ಸಿರಾಜ್ ಮದಕ, ಹಮೀದ್ ಕೈಕಂಬ, ವೆಂಕಪ್ಪ ಪೂಜಾರಿ, ಯೂಸುಫ್ ಕರಂದಾಡಿ, ರಝಾಕ್ ಕುಕ್ಕಾಜೆ, ಯಾನ್. ಅಬ್ದುಲ್ ಕರೀಮ್ ಬೊಳ್ಳಾಯಿ, ನ್ಯಾಯವಾದಿ ಸುರೇಶ್ ಕುಮಾರ್ ನಾವೂರು, ಮೊದಲಾದವರು ಭಾಗವಹಿಸಿದ್ದರು.