ಸಾರಾಂಶ
ಹಿರೇಕೆರೂರು: ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ಸೇವಾ ಮನೋಭಾವನೆ ಮೆರೆದ ಗಣ್ಯರಲ್ಲಿ ಬಿ.ಜಿ. ಬಣಕಾರ ಒಬ್ಬರು ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ತಿಳಿಸಿದರು.ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ಆವಣದಲ್ಲಿರುವ ಸರ್ವಜ್ಞ ಸಭಾ ಭವನದಲ್ಲಿ ಬಿ.ಜಿ. ಬಣಕಾರ ಅಡ್ವಕೇಟ್ ಪ್ರತಿಷ್ಠಾನ ಹಾಗೂ ಯು.ಬಿ. ಬಣಕಾರ ಅಭಿಮಾನಿ ಬಳಗ ವತಿಯಿಂದ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ರಾಜಕೀಯ ಜೀವನದಲ್ಲಿ ಇರುವವರಿಗೆ ಮಾತು, ಕೃತಿ ಒಂದೇ ಇರಬೇಕು. ಮೌಲ್ಯಾದಾರಿತ ರಾಜಕಾರಣವನ್ನು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕಾಣಲು ಸಾಧ್ಯ. ಅಂತಹ ಮುತ್ಸದ್ಧಿ ರಾಜಕಾರಣಿ ಬಿ.ಜಿ. ಬಣಕಾರ ಒಬ್ಬರು. ಅವರ ಕರ್ತವ್ಯನಿಷ್ಠೆ, ಸರಳತನ ಯುವಜನತೆಗೆ ಆದರ್ಶಗಳಾಗಿವೆ ಎಂದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಪ್ರತಿವರ್ಷ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ತಂದೆಯವರು ಹಾಕಿಕೊಟ್ಟಿರುವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಸಾಧನೆ ಮಾಡಿದವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದಾಗ ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಅಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅವರಿಗೆ ಹೆಚ್ಚಿನ ಪ್ರೇರಣೆ ನೀಡಲಾಗುತ್ತಿದೆ ಎಂದರು.ತಿಪ್ಪಾಯಿಕೊಪ್ಪ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಯು.ಬಿ. ಬಣಕಾರ ಅವರು ಜಾತಿ ಭೇದವಿಲ್ಲದೇ ಎಲ್ಲರನ್ನು ಒಗ್ಗೂಡಿಸಿಕೊಂಡು ಧರ್ಮ ಮತ್ತು ತತ್ವಗಳನ್ನು ಅಳವಡಿಸಿಕೊಂಡು ತಂದೆಯ ಆದರ್ಶಗಳನ್ನು ಪಾಲಿಸುತ್ತಾ ತಾಲೂಕಿನ ಜನರ ಜನಪ್ರಿಯ ಜನನಾಯಕರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹಂಸಭಾವಿ ಸಿದ್ದಲಿಂಗ ಸ್ವಾಮೀಜಿ, ವಿಧಾನಪರಿಷತ್ ಮಾಜಿ ಸಚೇತಕ ಡಿ.ಎಂ. ಸಾಲಿ, ಜಿ. ಶಿವನಗೌಡ, ಮಂಜುನಾಥ ತಂಬಾಕದ, ಎಸ್.ಎಸ್. ಪಾಟೀಲ, ಪಪಂ ಅಧ್ಯಕ್ಷೆ ಸುಧಾ ಚಿಂದಿ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಸನಾವುಲ್ಲಾ ಮಖನದಾರ, ಮಹೇಶ ಗುಬ್ಬಿ, ನಿಂಗಪ್ಪ ಚಳಗೇರಿ, ಕ್ಷೇತ್ರ ಶಿಕ್ಷಣಾಕಾರಿ ಎನ್. ಶ್ರೀಧರ, ಹನುಮಂತಗೌಡ ಭರಮಣ್ಣನವರ ಹಾಗೂ ಯು.ಬಿ. ಬಣಕಾರ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ಭಗೀರಥ ಅಸಾಧ್ಯವನ್ನು ಸಾಧಿಸಿದ ಛಲಗಾರ
ಹಾವೇರಿ: ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭಗೀರಥ ಉಪ್ಪಾರ ಸಮಾಜದ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು.ಜಿಲ್ಲಾ ಉಸ್ತವಾರಿ ಸಚಿವ ಶಿವಾನಂದ ಪಾಟೀಲ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಉಪನ್ಯಾಸಕ ಸತೀಶ್ ಎಂ.ಬಿ. ಮಾತನಾಡಿ, ಭಗೀರಥ ಮಹರ್ಷಿ ಘೋರ ತಪಸ್ಸಿನ ಮೂಲಕ ಪವಿತ್ರ ಗಂಗೆಯನ್ನು ಭೂಮಿಗೆ ತಂದ ಚೈತನ್ಯದ ಚಿಲುಮೆ ಹಾಗೂ ಛಲಗಾರ. ಭಗೀರಥರು ಅಸಾಧ್ಯವನ್ನು ಕಠಿಣ ಪ್ರಯತ್ನದ ಮೂಲಕ ಸಾಧ್ಯ ಮಾಡುವುದನ್ನು ತೋರಿಸಿದ್ದಾರೆ ಎಂದರು.ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಹಿರಿಯರಿಗೆ ಜಲದರ್ಪಣ ಮಾಡಿದ ಭಗೀರಥನ ಸಾಧನೆ ಅಸಾಮಾನ್ಯ. ಇದು ಪರಿಶ್ರಮ ಮತ್ತು ಕಠಿಣ ನಿರ್ಣಯಗಳ ಮೂಲಕ ಜಯ ಸಾಧಿಸಬಹುದು ಎಂಬುದಕ್ಕೆ ಮುನ್ನುಡಿಯಾಗಿದೆ. ಭಗೀರಥ ಮಹಿರ್ಷಿಗಳ ಅರಿತು, ಅವರ ಮಾರ್ಗದಲ್ಲಿ ನಡೆಯುವ ಅವಶ್ಯಕತೆ ಇದೆ ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ, ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ್. ತಹಸೀಲ್ದಾರ್ ಶರಣಮ್ಮ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಸಿ. ಚಿನ್ನಿಕಟ್ಟಿ, ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಉಪ್ಪಾರ ಸೇರಿದಂತೆ ಅನೇಕರು ಉಪ್ಥಿತರಿದ್ದರು.