ನೊಳಂಬ ಲಿಂಗಾಯತ ಸಮಾಜಕ್ಕೆ ಬಿ.ಗುರುಪ್ರಸಾದ್ ನೂತನ ಅಧ್ಯಕ್ಷ

| Published : Sep 24 2024, 01:51 AM IST

ನೊಳಂಬ ಲಿಂಗಾಯತ ಸಮಾಜಕ್ಕೆ ಬಿ.ಗುರುಪ್ರಸಾದ್ ನೂತನ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ತಾಲೂಕು ನೊಳಂಬ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಬಳ್ಳೆಕೆರೆಯ ಬಿ.ಗುರುಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಮಾಜದ ಕೇಂದ್ರ ಸಮಿತಿ ಕಾರ್ಯದರ್ಶಿ ಕಾಮನಕೆರೆ ಶಶಿಧರ್ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕು ನೊಳಂಬ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಬಳ್ಳೆಕೆರೆಯ ಬಿ.ಗುರುಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಮಾಜದ ಕೇಂದ್ರ ಸಮಿತಿ ಕಾರ್ಯದರ್ಶಿ ಕಾಮನಕೆರೆ ಶಶಿಧರ್ ಘೋಷಣೆ ಮಾಡಿದರು. ಪಟ್ಟಣದ ಎಲ್‍ಐಸಿ ಕಚೇರಿ ಹಿಂಭಾಗದ ನೊಳಂಬ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ನಡೆದ ಸಮಾಜದ ಸಭೆಯಲ್ಲಿ ಆಯ್ಕೆ ಘೋಷಿಸಿದರು. ಬಿ.ಗುರುಪ್ರಸಾದ್ ಅವರು ನಮ್ಮ ಸಮಾಜದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದು ರಾಜ್ಯದ ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜ್ಯ ಸರ್ಕಾರದ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಇನ್ ಚೀಫ್ ಆಗಿ ನಿವೃತ್ತರಾಗಿದ್ದು, ಪ್ರಸ್ತುತ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜೊತೆಗೆ ವಿಕಲಚೇತನರ ಅಭ್ಯುದಯ ಸಂಸ್ಥೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಾಲೂಕು ನೊಳಂಬ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದು, ನೊಳಂಬ ಸಹಕಾರ ಸಂಘ, ಸಮುದಾಯ ಭವನ, ಬಯಲು ಬಸವೇಶ್ವರ ಕಲ್ಯಾಣ ಮಂಟಪ ಸೇರಿದಂತೆ ಸಮಾಜದ ಬಂಧುಗಳಿಗೆ ಉತ್ತಮ ಸಹಕಾರ ನೀಡಿದ್ದಾರೆ. ಸಮಾಜ ಸರ್ವಾನುಮತದಿಂದ ಗುರುಪ್ರಸಾದ್ ಆಯ್ಕೆಮಾಡಿದ್ದು, ಮುಂದಿನ ದಿನಗಳಲ್ಲಿ ಸಮಾಜ ಮುನ್ನಡೆಸಲಿದ್ದಾರೆ ಎಂದರು.ನೂತನ ಅಧ್ಯಕ್ಷ ಬಿ.ಗುರುಪ್ರಸಾದ್ ಮಾತನಾಡಿ, ನಮ್ಮ ಸಮಾಜ ಕಳೆದ ಸುಮಾರು 20 ವರ್ಷಗಳಿಂದ ನಾಯಕರಿಲ್ಲದೆ ಸಮಾಜ ನಡೆದುಕೊಂಡು ಬಂದಿದೆ. ಸಮಾಜಕ್ಕೆ ಅಧ್ಯಕ್ಷರ ಅವಶ್ಯಕತೆ ಇದ್ದ ಕಾರಣ ತಾಲೂಕಿನ ಎಲ್ಲ ಹೋಬಳಿಗಳ ಮುಖಂಡರು ಸಭೆ ಸೇರಿ ತಮ್ಮನ್ನು ಆಯ್ಕೆ ಮಾಡಿದ್ದು ತಾವು ಸಮಾಜದ ಮುಖಂಡರಿಗೆ ಕೃತಜ್ಞತೆ ಹೇಳುತ್ತೇನೆ.ಎಲ್ಲ ಸಮಾಜದ ಮುಖಂಡರು ಹಾಗೂ ನಮ್ಮ ಸಮಾಜದ ಹಿರಿಯರು, ಕಿರಿಯರ ಸಲಹೆ ಸೂಚನೆ ಪಡೆದು ಸಮಾಜ ಮುನ್ನಡೆ ಸುತ್ತೇವೆ. ಮೊದಲು ಶೈಕ್ಷಣಿಕವಾಗಿ ಸಮಾಜಕ್ಕೆ ಕೊಡುಗೆ ನೀಡಬೇಕಿದ್ದು. ರಾಜಕೀಯದಿಂದ ದೂರ ಇದ್ದು ಸಮಾಜವನ್ನು ಸಂಘಟಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕಾಮನಕೆರೆ ಶಶಿಧರ್, ಕೆ.ಬಿ.ಬಸವರಾಜಪ್ಪ,ವಕೀಲರಾದ ರಾಜು, ಜಗದೀಶ್, ಕಲ್ಲೇಶಪ್ಪ, ಶಿಕ್ಷಕ ಮಲ್ಲಿಕಾರ್ಜುನ್, ಕುಶ ಸೇರಿದಂತೆ ಮತ್ತಿತರರು ಇದ್ದರು.23ಕೆಕೆಡಿಯು2.

ಕಡೂರು ತಾಲೂಕು ನೊಳಂಬ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಬಿ.ಗುರುಪ್ರಸಾದ್ ಆಯ್ಕೆಯಾದರು. ಅವರನ್ನು ಸಮಾಜದ ಬಂಧುಗಳು ಅಭಿನಂದಿಸಿದರು.