ಚಿಕ್ಕಮಗಳೂರುಬಡವರು, ಕಾರ್ಮಿಕರು ಮತ್ತು ರೈತರ ಹಕ್ಕುಗಳಿಗೆ ಹೋರಾಡಿದ ದಿಟ್ಟ ನಾಯಕ ಬಿ.ಕೆ.ಸುಂದರೇಶ್. ಅವರ ಅನೇಕ ಹೋರಾಟಗಳು ಸಮಾಜದಲ್ಲಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಹೇಳಿದರು.

ಜಿಲ್ಲಾ ಸಿಪಿಐ ಕಚೇರಿಯಲ್ಲಿ ನಡೆದ ದಿ. ಬಿ.ಕೆ.ಸುಂದರೇಶ್ ಅವರ 31ನೇ ಸಂಸ್ಮರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಡವರು, ಕಾರ್ಮಿಕರು ಮತ್ತು ರೈತರ ಹಕ್ಕುಗಳಿಗೆ ಹೋರಾಡಿದ ದಿಟ್ಟ ನಾಯಕ ಬಿ.ಕೆ.ಸುಂದರೇಶ್. ಅವರ ಅನೇಕ ಹೋರಾಟಗಳು ಸಮಾಜದಲ್ಲಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಹೇಳಿದರು.ಜಿಲ್ಲಾ ಸಿಪಿಐ ಕಚೇರಿಯಲ್ಲಿ ನಡೆದ ದಿ. ಬಿ.ಕೆ.ಸುಂದರೇಶ್ ಅವರ 31ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಜಿಲ್ಲೆಯ ಜನರ ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸಿ ಹಲವರಿಗೆ ನ್ಯಾಯ ಕೊಡಿಸುವಲ್ಲಿ ಬಿ.ಕೆ. ಸುಂದರೇಶ್ ಮೊದಲಿಗರು. ರೈತರ, ಕೂಲಿ ಕಾರ್ಮಿಕರು, ಅಂಗನವಾಡಿ ಕಾರ್ಯರ್ತೆಯರ ಧ್ವನಿಯಾಗಿ ಹೋರಾಟ ಮಾಡಿದ ಜನಾನುರಾಗಿದ್ದರು. ಇಂತಹ ನಾಯಕನನ್ನು ಪಕ್ಷ ಮತ್ತು ಜಿಲ್ಲೆ ಕಳೆದುಕೊಂಡಿರುವುದು ದುರ್ದೈವ ಎಂದರು.

ಸುಂದರೇಶ್ ಅವರ ಆದರ್ಶ ಬದುಕು ಇಂದಿನ ಯುವಕರಿಗೆ ಪ್ರೇರಣಾ ದೀಪ. ಶೋಷಿತರು, ದಿನಗೂಲಿ ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಸ್ವಇಚ್ಚೆಗಾಗಿ ಬದುಕದೇ, ಸದಾಕಾಲ ಶೋಷಿತರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಹೋರಾಟದ ಫಲವಾಗಿತ್ತು. ಇದಕ್ಕೆ ಜನಸಾಮಾನ್ಯರಿಗೆ ಅಭಿಮಾನದಿಂದ ಜಿಲ್ಲೆಯ ವಿವಿಧ ವೃತ್ತಗಳಲ್ಲಿ ಬಿಕೆಎಸ್ ಹೆಸರನ್ನು ನಾಮಕರಣಗೊಳಿಸಿದ್ದಾರೆ ಎಂದು ಹೇಳಿದರು.ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್‌ಕುಮಾರ್ ಮಾತನಾಡಿ, ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಮುಖಂಡರಿಗೆ ಸುಂದರೇಶ್ ಪ್ರೇರಣೆ. ಇಂಥ ವ್ಯಕ್ತಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರಿದರೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.ಸಿಪಿಐ ಜಿಲ್ಲಾ ಮಾಜಿ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ಇಂದಿನ ರಾಜಕಾರಣದಲ್ಲಿ ಕಾಲಕ್ಕೆ ತಕ್ಕಂತೆ ಬದ ಲಾಗುವ ಸನ್ನಿವೇಶವಿದೆ. ಸುಂದರೇಶ್ ರಾಜಕೀಯ ಎನ್ನುವುದು ಜನರ ಸೇವೆಯೇ ಹೊರತು ವೈಯಕ್ತಿಕ ಆದಾಯ ಮಾಡುವುದಾಗಿರಲಿಲ್ಲ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಜಿಲ್ಲಾ ಸಹ ಕಾರ್ಯದರ್ಶಿ ಸೋಮೇಗೌಡ, ಹೆಡದಳ್ ಕುಮಾರ್, ನಗರ ಕಾರ್ಯದರ್ಶಿ ರಮೇಶ್‌, ಮುಖಂಡರಾದ ಎಚ್.ಎಂ.ರೇಣುಕಾರಾಧ್ಯ, ಉಮೇಶ್, ಜೇರ್ಮಿ ಲೋಬೋ ಉಪಸ್ಥಿತರಿದ್ದರು. 2 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಸಿಪಿಐ ಕಚೇರಿಯಲ್ಲಿ ದಿ. ಬಿ.ಕೆ.ಸುಂದರೇಶ್ ಅವರ 31ನೇ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಜಿ. ರಘು, ವಿಜಯಕುಮಾರ್‌, ರಾಧಾ ಸುಂದರೇಶ್‌, ರಮೇಶ್‌, ಹೆಡದಾಳ್‌ ಕುಮಾರ್‌ ಇದ್ದರು.