ನರಸಿಂಹರಾಜಪುರ ಬಿ.ಎಚ್.ಕೈಮರ, ತರೀಕೆರೆ, ಶಿವನಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ 37 ವರ್ಷಗಳ ಕಾಲ ಅಚ್ಚುಕಟ್ಟಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮೊಹಮ್ಮದ್ ರೆಹಮತ್ ಉಲ್ಲಾ ಅವರ ಸೇವೆ ಶ್ಲಾಘನೀಯ ಎಂದು ಶಿವಮೊಗ್ಗ ಜಿಲ್ಲೆಯ ಗಾಜನೂರು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಟಿ.ಶೇಖರಪ್ಪ ಹೇಳಿದರು.

- ಬಿ.ಎಚ್.ಕೈಮರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಿಗೆ ಬೀಳ್ಕೊಡಿಗೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಿ.ಎಚ್.ಕೈಮರ, ತರೀಕೆರೆ, ಶಿವನಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ 37 ವರ್ಷಗಳ ಕಾಲ ಅಚ್ಚುಕಟ್ಟಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮೊಹಮ್ಮದ್ ರೆಹಮತ್ ಉಲ್ಲಾ ಅವರ ಸೇವೆ ಶ್ಲಾಘನೀಯ ಎಂದು ಶಿವಮೊಗ್ಗ ಜಿಲ್ಲೆಯ ಗಾಜನೂರು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಟಿ.ಶೇಖರಪ್ಪ ಹೇಳಿದರು.

ಬುಧವಾರ ಸಿಂಸೆ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ನಡೆದ ಬಿ.ಎಚ್.ಕೈಮರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಮ್ಮಿಕೊಂಡಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನಿವೃತ್ತ ಪ್ರಾಚಾರ್ಯ ಮೊಹಮ್ಮದ್ ರೆಹಮತ್ ಉಲ್ಲಾ ಅವರ ಬೀಳ್ಗೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಮೊಹಮ್ಮದ್‌ ರೆಹಮತ್ ಉಲ್ಲಾ ಅವರು 3 ತರಬೇತಿ ಸಂಸ್ಥೆಗಳ ಪ್ರಾಂಶುಪಾಲರಾಗಿದ್ದರೂ ಎಲ್ಲಾ ಸಂಸ್ಥೆಗಳಲ್ಲೂ ಯಾವುದೇ ಲೋಪವಿಲ್ಲದೆ ಕಾರ್ಯ ನಿರ್ವಹಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಅತಿಥಿಯಾಗಿದ್ದ ಹಿರಿಯೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಝರೀಪ್ ಉಲ್ಲಾ ಮಾತನಾಡಿ, ಮೊಹಮ್ಮದ್ ರೆಹಮತ್ ಉಲ್ಲಾ ತರಬೇತಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವಾಗ ನಾನು ಕಿರಿಯ ತರಬೇತಿಯಾಗಿ ಕಾರ್ಯ ನಿರ್ವಹಿಸಿದ್ದು ಅ‍ವರ ಕಾರ್ಯ ವೈಖರಿ ಹತ್ತಿರದಿಂದ ಗಮನಿಸಿದ್ದೇನೆ. ಅವರು ನೀಡುವ ತರಬೇತಿ ವಿದ್ಯಾರ್ಥಿಗಳ ಮೇಲೆ ಉತ್ತಮ ಪರಿಣಾಮ ಬೀರುತ್ತಿತ್ತು. ನಂತರ ಪ್ರಾಂಶುಪಾಲರಾಗಿಯೂ ಅವರ ಸೇವೆ ಅನನ್ಯ ಎಂದರು.

ಅತಿಥಿಯಾಗಿದ್ದ ಹೊನ್ನಾಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಸುರೇಶ್ ಕುಮಾರ್ ಮಾತನಾಡಿ, ಒಂದು ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆ. ನಾನು ಹಾಗೂ ಮೊಹಮ್ಮದ್ ರೆಹಮತ್ ಉಲ್ಲಾ ಒಂದೇ ದಿನ ಕೈಗಾರಿಕಾ ತರಬೇತಿ ಸಂಸ್ಥೆಗೆ ಸೇರ್ಪಡೆಗೊಂಡಿದ್ದೆವು ಎಂದು ನೆನಪಿಸಿಕೊಂಡರು.

ಸಂಸ್ಥೆ ಪ್ರಾಂಶುಪಾಲ ಸಿದ್ದೇಶ್ ಮಾತನಾಡಿ, ಬಿ.ಎಚ್.ಕೈಮರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾರಂಭವಾದ ಅವಧಿಯಲ್ಲಿ ನಾನು ಪ್ರಾಚಾರ್ಯನಾಗಿದ್ದೆ. ನಂತರ ಮೊಹಮ್ಮದ್ ರಹಮತ್ ಉಲ್ಲಾ ಅಧಿಕಾರ ವಹಿಸಿಕೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದರು ಎಂದರು.

ಬಿ.ಎಚ್.ಕೈಮರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನಿವೃತ್ತ ತರಬೇತಿ ಅಧಿಕಾರಿ ತಿಮ್ಮಪ್ಪ, ಕಚೇರಿ ಅಧೀಕ್ಷಕ ಕಿರಣ್ ಬೇಂದ್ರೆ, ಬಳ್ಳಾರಿ ಕಿರಿಯ ಅಧಿಕಾರಿ ಶಂಕರ್, ಬಾಳೆಹೊನ್ನೂರು ಐಟಿಐ ತರಬೇತಿ ಸಂಸ್ಥೆ ಪ್ರಾಂಶುಪಾಲ ಆನಂದ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಿ.ಎಚ್.ಕೈಮರ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗೆ ಹೊಸದಾಗಿ ಪ್ರಾಂಶುಪಾಲರಾಗಿ ನೇಮಕ ಗೊಂಡ ಬಿ.ಎಸ್.ಮಂಜುನಾಥ್ ಅವರನ್ನು ಸಂಸ್ಥೆಯ ಸಿಬ್ಬಂದಿ ಸನ್ಮಾನಿಸಿ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ವಾಣಿ ಸ್ವಾಗತಿಸಿದರು. ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು. ಸುಮ ವಂದಿಸಿದರು.