ಈ ನಾಟಕವು ಮಲ್ಲಿಕಾರ್ಜುನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಶರಣಪ್ಪ ಕಲಾಲ ರಚಿಸಿ, ನಿರ್ದೇಶಿಸಿ, ನಟಿಸಿದ ವಿಭಿನ್ನ ಹಾಗೂ ಸುಂದರ ಕಥಾಹಂದರ ಹೊಂದಿದೆ.
ಮುಂಡರಗಿ: ಜ. 3 ಮತ್ತು 4ರಂದು ಎರಡು ದಿನಗಳ ಕಾಲ ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲೂಕಿನ ಶಿಕ್ಷಕರ ದಾರ್ಶನಿಕ ಕಲಾತಂಡದಿಂದ ಪ್ರದರ್ಶನಗೊಂಡ “ದೇವಲೋಕದಲ್ಲಿ ಸಮಾನತೆ ತಂದ ಬಾಬಾ ಸಾಹೇಬ” ಎಂಬ ಕಿರುನಾಟಕ ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಮಲ್ಲಿಕಾರ್ಜುನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಶರಣಪ್ಪ ಕಲಾಲ ರಚಿಸಿ, ನಿರ್ದೇಶಿಸಿ, ನಟಿಸಿದ ವಿಭಿನ್ನ ಹಾಗೂ ಸುಂದರ ಕಥಾಹಂದರ ಹೊಂದಿದೆ.ವಿಷ್ಣುವಿನ ಪಾತ್ರದಲ್ಲಿ ಮೇವುಂಡಿ ಶಾಲೆಯ ಮುಖ್ಯೋಪಾಧ್ಯಾಯ ಎಸ್.ವಿ. ಅರಿಶಿಣದ, ಡಾ. ಬಿ.ಆರ್. ಅಂಬೇಡ್ಕರ್ ಪಾತ್ರದಲ್ಲಿ ಶಿಕ್ಷಕ ವಿಶ್ವನಾಥ ಉಳ್ಳಾಗಡ್ಡಿ, ಚಿತ್ರಗುಪ್ತ ಹಾಗೂ ಗಣೇಶನ ಪಾತ್ರದಲ್ಲಿ ಸಂಗಮೇಶ ನಿಡಗುಂದಿ ಶಿಕ್ಷಕರು ಬ್ರಹ್ಮ ಹಾಗೂ ದ್ವಾರಪಾಲಕರ ಪಾತ್ರದಲ್ಲಿ ಮುಂಡರಗಿ ಶಿಕ್ಷಕ ಎಸ್.ಡಿ. ಬಸೇಗೌಡ್ರ, ಮಹದೇವನ ಪಾತ್ರದಲ್ಲಿ ಶಿಕ್ಷಕ ಎಂ.ಎಸ್. ಪಾಟೀಲ್, ಪಾರ್ವತಿ ಪಾತ್ರದಲ್ಲಿ ಹಿರೇವಡಟ್ಟಿ ಶಿಕ್ಷಕಿ ಶಿಕ್ಷಕಿಯರು ಹಿರೇವಡ್ಡಟ್ಟಿ, ಚಿತ್ರಗುಪ್ತ ಹಾಗೂ ಗಣೇಶನ ಪಾತ್ರದಲ್ಲಿ ಶಿರೋಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಗಮೇಶ ನಿಡಗುಂದಿ ಸೇರಿದಂತೆ ಅನೇಕರು ಅಭಿನಯಿಸಿದರು.
ಜಿಲ್ಲಾಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಂಘಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ನೌಕರರ ಸಂಘದ ಕಾರ್ಯದರ್ಶಿ ಶಂಕರ ಸರ್ವದೇ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಸಜ್ಜನ ಶುಭ ಕೋರಿ ಹಾರೈಸಿದರು.