ಜನ್ಮದಿನದಂದೇ ದುರ್ಮರಣ ಹೊಂದಿದ ಬಬ್ಬೂರು ಯುವಕ

| Published : Aug 07 2024, 01:09 AM IST

ಸಾರಾಂಶ

Babbur was a young man who died on his birthday

ಹಿರಿಯೂರು: ಯುವಕನೊಬ್ಬ ತನ್ನ ಹುಟ್ಟುಹಬ್ಬದ ಸಡಗರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಗಿನ ಜಾವ ತಾಲೂಕಿನ ಬಬ್ಬೂರು ಗ್ರಾಮದ ಲಕ್ಕಪ್ಪ ಅವರ ಮನೆಯ ಸಮೀಪ ನಡೆದಿದೆ. ಬಬ್ಬೂರು ಗ್ರಾಮದ ಯುವಕ ಡಿ.ವಿ.ತಿಪ್ಪೇಸ್ವಾಮಿ(27) ಮೃತ ರ್ದುದೈವಿ. ಸೋಮವಾರ ಮೃತನ ಹುಟ್ಟು ಹಬ್ಬವಿದ್ದ ಕಾರಣ ಸ್ನೇಹಿತರ ಜತೆಯಲ್ಲಿ ಊಟಕ್ಕಾಗಿ ಬಬ್ಬೂರು ಗ್ರಾಮದ ಹೊರಭಾಗದಲ್ಲಿದ್ದ ವೈಟ್ ವಾಲ್‌ಗೆ ಹೋಗಿದ್ದನು. ಈ ವೇಳೆ ಊಟ ಮುಗಿಸಿಕೊಂಡು ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಬೈಕ್ ಮೂಲಕ ವಾಪಾಸ್‌ ಮನೆಗೆ ಬರುವಾಗ ರಸ್ತೆಯಲ್ಲಿದ್ದ ಮಣ್ಣಿನ ಗುಡ್ಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಬಿದ್ದಿದ್ದಾನೆ. ತಲೆ ಹಾಗೂ ಇತರ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

-------

ಫೋಟೊ:1 ಮೃತ ಯುವಕ ತಿಪ್ಪೇಸ್ವಾಮಿ