ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಾಜಿ ಉಪ ಪ್ರಧಾನಿ ಬಾಬುಜಗಜೀವನ್ ರಾಂ ಅವರು ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಎಂದು ಶಾಶಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬಾಬು ಜಗಜೀವನ್‌ರಾಂ ಅವರ 118ನೇ ಜನ್ಮ ದಿನಾಚರಣೆಯ ಮೆರವಣಿಗೆ ವೇಳೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಪಿಸಿ ಮಾತನಾಡಿದರು.
ದೇಶಕ್ಕೆ ಸಂವಿಧಾನವನ್ನು ಡಾ ಬಿ.ಆರ್ ಅಂಬೇಡ್ಕರ್ ಜಾರಿಗೆ ತಂದರೆ, ಹಸಿರು ಕ್ರಾಂತಿಯ ಹರಿಕಾರ ಬಾಬು ಜನಜೀವನ್ ರಾಂ ಅವರು ದೇಶಕ್ಕೆ ಹಸಿರು ಕ್ರಾಂತಿಯನ್ನು ಮಾಡಲು ಹೋರಾಟ ಮಾಡಿದರು. ಈ ಮಹಾನ್ ವ್ಯಕ್ತಿಯ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.ಈ ವೇಳೆ ತಹಶೀಲ್ದಾರ್ ಪರುಶುರಾಂ ಸತ್ತಿಗೇರಿ, ಮುಖ್ಯಾಧಿಕಾರಿ ಎಂ.ರಾಜಣ್ಣ, ಬಿಇಒ ಮಹೇಶ್, ವೈದ್ಯಾಧಿಕಾರಿ ಡಾ. ಮಾರುತಿ, ಎಇಇ ರಾಮಕೃಷ್ಣ, ಎಇಇ ಯಶ್ವಂತ್, ಪುರಸಭಾ ಉಪಾಧ್ಯಕ್ಷ ಎಂ.ಎಲ್. ದಿನೇಶ್, ಸದಸ್ಯ ದಯಾನಂದ್, ಬಾಬು ಜಗಜೀವನ್ ಆಚರಣ ಜಿಲ್ಲಾ ಸಮಿತಿ ಅಧ್ಯಕ್ಷ ಅರಕೆರೆ ಸಿದ್ದರಾಜು, ತಾಲೂಕು ಸಮಿತಿ ಅಧ್ಯಕ್ಷ ಆಟೋ ಶಂಕರ್, ಬೌಧ ಮಹಾ ಸಭಾದ ಕೆ.ಟಿ.ರಂಗಯ್ಯ , ಅರಕೆರೆ ಶಿವಯ್ಯ, ದಲಿತ ಸಂಘಟನೆಯ ಕುಬೇರಪ್ಪ, ರವಿಚಂದ್ರ ಸೇರಿದಂತೆ ಇತರ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಭಾರತೀಯ ಕೃಷಿಯನ್ನು ಆಧುನೀಕರಣಗೊಳ್ಳಲು ಬಾಬೂಜಿ ಮಹತ್ತರ ಪಾತ್ರ: ಸಂತೋಷ್ ಕುಮಾರ್ಕನ್ನಡಪ್ರಭ ವಾರ್ತೆ ಪಾಂಡವಪುರ
ಹಸಿರು ಕ್ರಾಂತಿ ಪಿತಾಮಹ ಬಾಬುಜಗಜೀವನ ರಾಮ್ ಅವರು ಭಾರತೀಯ ಕೃಷಿಯನ್ನು ಆಧುನೀಕರಣಗೊಳ್ಳಲು ಮಹತ್ತರ ಪಾತ್ರ ವಹಿಸಿದ್ದರು ಎಂದು ತಹಸೀಲ್ದಾರ್ ಸಂತೋಷ್‌ಕುಮಾರ್ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ನಡೆದ ಡಾ.ಬಾಬುಜಗಜೀವನ ರಾಂ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿ, ಬಾಬು ಜಗಜೀವನ ರಾಮ್ ಅವರು ದೇಶದಲ್ಲಿ ಸಮಾನತೆ ಕಲ್ಪಿಸುವ ಹಾಗೂ ಸ್ವಾತಂತ್ರ್ಯ ಚಳವಳಿಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಕಣಿವೆಯೋಗೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರು ದೇಶದಲ್ಲಿ ತಾಂಡವಾಡುತ್ತಿದ್ದ ಅಸ್ಪೃಶ್ಯತೆ, ಅಸಮಾನತೆಯ ವಿರುದ್ದ ಹೋರಾಟ ನಡೆಸಿದ ಮಹಾನ್ ನಾಯಕರು ಎಂದರು.ವಿಜಯ ಕಾಲೇಜಿ ಪ್ರಾಧ್ಯಾಪಕ ಜಯಕುಮಾರ್ ಉಪನ್ಯಾಸ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ಅಶ್ವಿನಿ, ರಕ್ಷಿತಾ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ತಾಪಂ ಇಒ ಲೋಕೇಶ್‌ಮೂರ್ತಿ, ತಾಪಂ ಮಾಜಿ ಸದಸ್ಯ ಅಲ್ಪಳ್ಳಿಗೋವಿಂದಯ್ಯ, ದಸಂಸ ಮುಖಂಡರಾದ ಟೌನ್ ಚಂದ್ರು, ಕಣಿವೆರಾಮು, ಅಂಕಯ್ಯ, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ಸಿಬ್ಬಂದಿ ಕೋಮಲ, ಲೋಕೇಶ್, ಅರಳಕುಪ್ಪೆ ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.