ಬಾಬು ಜಗಜೀವನರಾಮ, ಅಂಬೇಡ್ಕರ್‌ ಜಯಂತಿ: ಸರಳ ಆಚರಣೆಗೆ ನಿರ್ಧಾರ

| Published : Mar 28 2024, 12:52 AM IST

ಬಾಬು ಜಗಜೀವನರಾಮ, ಅಂಬೇಡ್ಕರ್‌ ಜಯಂತಿ: ಸರಳ ಆಚರಣೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಮದುರ್ಗ: ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏ.5 ರಂದು ಬಾಬು ಜಗಜೀವನರಾಮರ ಮತ್ತು ಏ.14 ರಂದು ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಬೇಕಾಗುತ್ತದೆ ಎಂದು ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್‌ ಸುರೇಶ ಚವಲಾರ ಹೇಳಿದರು. ಪಟ್ಟಣದ ವಿಧಾನ ಸೌಧದಲ್ಲಿ ನಡೆದ ಡಾ.ಬಾಬು ಜಗಜೀವನರಾಮ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏ.5 ರಂದು ಬಾಬು ಜಗಜೀವನರಾಮರ ಮತ್ತು ಏ.14 ರಂದು ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಬೇಕಾಗುತ್ತದೆ ಎಂದು ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್‌ ಸುರೇಶ ಚವಲಾರ ಹೇಳಿದರು.ಪಟ್ಟಣದ ವಿಧಾನ ಸೌಧದಲ್ಲಿ ನಡೆದ ಡಾ.ಬಾಬು ಜಗಜೀವನರಾಮ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಏ.5 ರಂದು ಬಾಬು ಜಗಜೀವನ್‌ರಾಮ್‌ ಹಾಗೂ ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು. ಇದಕ್ಕೆ ದಲಿತ ಮುಖಂಡರು ಏ.14 ರಂದು ತಾಲೂಕು ಆಡಳಿತ ಸರಳವಾಗಿ ಆಚರಿಸುವುದು ಬೇಡ. ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡಬೇಕು ಎಂದು ಸಂಘಟನೆಗಳ ಮುಖಂಡರು ಹೇಳಿದರು. ಜಿಲ್ಲಾ ಕೇಂದ್ರದಲ್ಲಿ ಚುನಾವಣಾ ನೀತಿ ಸಂಹಿತೆ ಇದ್ದರೂ ವಿಜೃಂಭಣೆಯ ಆಚರಣೆಗೆ ಅವಕಾಶ ಇರುತ್ತೆ. ಇದು ತಾಲೂಕು ಕೇಂದ್ರವಾಗಿರುವುದರಿಂದ ನೀತಿ ಸಂಹಿತೆ ಅನ್ವಯಿಸುತ್ತದೆ. ನಾವು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಅನುಮತಿ ಪಡೆಯುತ್ತೇವೆ ಎಂದು ಬಿ.ಆರ್.ದೊಡಮನಿ ಹೇಳಿದ್ದು, ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಿ ನಿರ್ಧಾರ ಮಾಡುವುದಾಗಿ ತಹಸೀಲ್ದಾರ್‌ ಸುರೇಶ ಚವಲಾರ ಕೂಡ ತಿಳಿಸಿದರು.ಸಹಾಯಕ ಚುನಾವಣಾಧಿಕಾರಿ ಪ್ರಶಾಂತ ಹನಗಂಡಿ ಮಾತನಾಡಿ, ಚುನಾವಣೆ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಮಾತ್ರ ಚುನಾವಣೆ ಆಯೋಗದ ಅನುಮತಿ ಪಡೆಯಬೇಕು. ಉಳಿದ ಕಾರ್ಯಕ್ರಮಗಳಿಗೆ ನಮ್ಮ ಅನುಮತಿ ಅವಶ್ಯವಿಲ್ಲ. ಆದರೆ, ಕಾರ್ಯಕ್ರಮದಲ್ಲಿ ಮಾದರಿ ನೀತಿ ಸಂಹಿತಿ ಉಲ್ಲಂಘನೆಯಾದರೇ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಳಿಕ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮಹಾನಾಯಕರ ಜಯಂತಿ ಆಚರಣೆಗೆ ಕ್ರಮಕೈಗೊಳ್ಳವುದಾಗಿ ತಾಪಂ ಇಒ ಬಸವರಾಜ ಐನಾಪೂರ ಹೇಳಿದರು. ಸಭೆಯಲ್ಲಿ ದಲಿತ ಮುಖಂಡರಾದ ರಮೇಶ ಮಾದರ, ಗೋಪಾಲ ಮಾದರ, ಬಸವರಾಜ ಮಾದರ, ಚಿದಾನಂದ ದೊಡಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಸ್ವಾಗತಿಸಿ, ವಂದಿಸಿದರು.

ಕೋಟ್‌...ದಲಿತ ಸಂಘಟನೆಗಳ ಹೆಸರಲ್ಲಿ ಕೆಲವರು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಂದ ಹಣ ಕೇಳುತ್ತಿದ್ದಾರೆಂಬ ದೂರು ಬಂದಿದ್ದು, ಯಾರಿಗೂ ಹಣ ನೀಡದೇ ಅಂತವರ ವಿರುದ್ಧ ದೂರು ನೀಡಬೇಕು.ಬಿ.ಆರ್.ದೊಡಮನಿ, ದಲಿತ ಮುಖಂಡ.