ತಳ ಸಮುದಾಯಗಳಿಗೆ ನ್ಯಾಯ ಕಲ್ಪಿಸಿದ ಬಾಬೂಜಿ

| Published : Apr 06 2025, 01:46 AM IST

ಸಾರಾಂಶ

ಡಾ.ಬಾಬು ಜಗಜೀವನ ರಾಂ ಜಯಂತಿಯಲ್ಲಿ ಜಗದೀಶ್ ಹೇಳಿಕೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಡಾ.ಬಿ.ಆರ್.ಅಂಬೇಡ್ಕರ್ ಜೊತೆಗೆ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದವರಲ್ಲಿ ಡಾ.ಬಾಬು ಜಗಜೀವನ ರಾಂ ಪ್ರಮುಖರು. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಸರ್ವರೂ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಬಾಳುವಂತೆ ತಹಸೀಲ್ದಾರ್ ಜಗದೀಶ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ನಡೆದ ಡಾ.ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕಂಡ ಅಪರೂಪದ ರಾಜಕಾರಣಿಗಳಲ್ಲಿ ಡಾ.ಬಾಬು ಜಗಜೀವನ ರಾಂ ಒಬ್ಬರಾಗಿದ್ದಾರೆ. ಅವರ ಆಡಳಿತದಲ್ಲಿ ನಡೆದ ಅನೇಕ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಂ ಪ್ರಮುಖರು. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಸರ್ವರೂ ಗೌರವಿಸಿ ಆರಾಧಿಸುವಂತೆ ತಿಳಿಸಿದರು.

ಜೀತ ಪದ್ಧತಿ ಜಾರಿಯಲ್ಲಿದ್ದಾಗ ಹೋರಾಟ ಮೂಲಕ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಶ್ರಮಿಸಿದ್ದರು. ಹಸಿವು ಮುಕ್ತ ಭಾರತ ನಿರ್ಮಾಣ ಮಾಡಲು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಿ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂದು ಹೆಸರಾಗಿದ್ದಾರೆ. ತಳ ಸಮುದಾಯಗಳಿಗೆ ನ್ಯಾಯ ಕಲ್ಪಿಸಲು ಹಗಲಿರುಳು ಕೈಗೊಂಡಿದ್ದ ಅವರ ಹೋರಾಟ ಅವಿಸ್ಮರಣೀಯ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪ್ರಕಾಶ, ದಸಂಸ ಸಂಚಾಲಕ ಕರಿಬಸಪ್ಪ ಮಾತನಾಡಿದರು.

ಈ ವೇಳೆ ಸಿಪಿಐ ವಸಂತ ವಿ.ಅಸೂದೆ, ಪಿಎಸ್ಐ ಪಾಂಡುರಂಗಪ್ಪ, ಡಾ.ರಂಗಪ್ಪ, ನಾಸಿರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ, ಲಿಂಗರಾಜ್, ನಂದೀಶ್, ಶ್ರೀನಿವಾಸಮೂರ್ತಿ, ಬಿ.ಟಿ.ನಾಗಭೂಷಣ, ರಾಯಪುರ ನಾಗೇಂದ್ರಪ್ಪ, ದೇವಸಮುದ್ರ ಚಂದ್ರಣ್ಣ, ಪಂಚಾಯಿತಿ ಸದಸ್ಯ ಎಂ ಅಬ್ದುಲ್ಲಾ, ಬಡೋಬಯ್ಯ, ಯರೆಜ್ಜನಹಳ್ಳಿ ನಾಗರಾಜ, ಮೆರ್ಲಹಳ್ಳಿ ಹನುಮಂತಪ್ಪ, ಮುಜೀಬ್, ಚಂದ್ರಶೇಖರ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಸೋಮಶೇಖರ, ಮರಿಸ್ವಾಮಿ ಇದ್ದರು.