ಬಾಬೂಜಿ ಸಮಾನತೆಗೆ ಶ್ರಮಿಸಿದ ಧೀಮಂತ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ

| Published : Apr 06 2025, 01:46 AM IST

ಬಾಬೂಜಿ ಸಮಾನತೆಗೆ ಶ್ರಮಿಸಿದ ಧೀಮಂತ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಾಬು ಜಗಜೀವನರಾಂ ಅವರು ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ, ಸಚಿವರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ರಾಜ್ಯದ, ರಾಷ್ಟ್ರದ ಕೃಷಿ ಸಚಿವರಾಗಿ ಹಸಿರುಕ್ರಾಂತಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ.

ಹಾವೇರಿ: ಡಾ. ಬಾಬು ಜಗಜೀವನರಾಂ ಅವರು ಬಡವರು, ದೀನ- ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾಗೂ ಸಮಾಜದ ಸಮಾನತೆಗಾಗಿ ಹೋರಾಡಿದ ಧೀಮಂತ ನಾಯಕ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಬಣ್ಣಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಹಾಗೂ ಪರಿಶಿಷ್ಟ ಜಾತಿಗಳ ಒಕ್ಕೂಟಗಳ ಆಶ್ರಯದಲ್ಲಿ ಡಾ. ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪಾರ್ಚಣೆ ಮಾಡಿ ಮಾತನಾಡಿದರು.

ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕ ಡಾ. ಬಾಬು ಜಗಜೀವನರಾಂ ಅವರು ಶೋಷಿತರ ಆಶಾಕಿರಣರಾಗಿದ್ದಾರೆ ಎಂದರು.ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ, ಸಚಿವರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ರಾಜ್ಯದ, ರಾಷ್ಟ್ರದ ಕೃಷಿ ಸಚಿವರಾಗಿ ಹಸಿರುಕ್ರಾಂತಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಆಹಾರ ಕೊರತೆ ಇದ್ದಾಗ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿ ಸಮರ್ಥವಾಗಿ ಎದುರಿಸಿ, ಹಸಿರುಕ್ರಾಂತಿಯ ಹರಿಕಾರ ಎಂದೇ ಖ್ಯಾತಿಯಾದರು ಹಾಗೂ ರಕ್ಷಣಾ ಸಚಿವರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಲ್ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ಸಮಾಜದ ಪರಿವರ್ತನೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರು ತೋರಿದ ದಾರಿಯಲ್ಲಿಯೇ ನಾವೆಲ್ಲರೂ ಸಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಕೆಲಸ ಮಾಡೋಣ ಎಂದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರ್ಗಪ್ಪನವರ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಕೆ.ಎಂ. ಮಂಜಾನಾಯ್ಕ್, ತಹಸೀಲ್ದಾರ್ ಶರಣಮ್ಮ ಕೆ. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಹಿಂದುಳಿದ ವರ್ಗ ಅಭಿವೃದ್ಧಿಗೆ ಶ್ರಮಿಸಿದ ಬಾಬೂಜಿ

ಹಾವೇರಿ: ದಲಿತ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಡಾ. ಬಾಬು ಜಗಜೀವನರಾಂ ಅವರ ಸೇವೆಯನ್ನು ದೇಶದ ಜನತೆಯು ಸದಾ ಸ್ಮರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ 118ನೇ ಡಾ. ಬಾಬು ಜನಜೀವನರಾಂ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಾ. ಬಾಬು ಜಗಜೀವನರಾಂ ರಾಜಕೀಯ ಜೀವನ ಚರಿತ್ರೆಯಲ್ಲಿ ದಾಖಲು ಮಾಡುವಂತದಾಗಿದ್ದು, ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನರಾಂ ಮುಟ್ಟದ ಖಾತೆಗಳೆ ಇಲ್ಲ.ಸ್ವತಂತ್ರ ಭಾರತದಲ್ಲಿ ಹೆಚ್ಚು ಖಾತೆಗಳನ್ನು ದಕ್ಷ, ಪ್ರಾಮಾಣಿಕತೆ ಉತ್ತಮ ಗುಣಮಟ್ಟದ ಆಡಳಿತ ನೀಡಿದ ಕೀರ್ತಿಗೆ ಏಕೈಕ ವ್ಯಕ್ತಿತ್ವ ಬಾಬೂಜಿ ಅವರದಾಗಿದೆ ಎಂದರು.ದೇಶದಲ್ಲಿ ಡಾ. ಬಾಬು ಜೀವನರಾಂ ಅವರು ಉಪಪ್ರಧಾನಿಯಾಗಿದ್ದರು. ಕೃಷಿ ಸಚಿವರಾರಾಗಿ ಭೂ ಸುಧಾರಣೆ ತರಲು ಯತ್ನಿಸಿದ ವ್ಯಕ್ತಿ ಹಸಿದ ದೇಶಕ್ಕೆ ಹಸಿರು ನೀಡಲು ಮುಂದಾದರು ಎಂದರು.

ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಸವರಾಜ ಹೆಡಿಗೊಂಡ, ಜಗದೀಶ ಹರಿಜನ, ಬಸವಣ್ಣೆಪ್ಪ ಅಳ್ಳಳ್ಳಿ, ಹನಮಂತ ಹೌಂಶಿ, ಹನುಮಂತಪ್ಪ ಸಿ.ಡಿ., ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಡಕ್ಕಣ್ಣನವರ, ಕಲಾ ತಂಡದ ಜಿಲ್ಲಾಧ್ಯಕ್ಷ ಬಸವರಾಜ ಕಾಳಿ, ಯಲ್ಲಮ್ಮ ಕೋಪುರ, ಗೀತಾ ಕಡೇಮನಿ, ಕನ್ನವ್ವ ಬಿಲ್ಲಣ್ಣನವರ, ಸುಮಂಗಲಾ ಹರಿಜನ, ನೇತ್ರಾ ದೊಡ್ಡಮನಿ, ಸರೋಜವ್ವ ಹರಿಜನ, ಅನ್ನಪೂರ್ಣ ಹರಕೇರಿ, ಮಂಜು ದೊಡ್ಡಮರಿಯಮ್ಮನವರ, ಹನುಮಂತಪ್ಪ ಹಲಗೇರಿ, ಮಂಜು ಬೆಳವಿಗಿ, ಪರಶುರಾಮ ಹಲಗೇರಿ, ನವೀನ ಸಿದ್ದಣ್ಣನವರ ಸೇರಿದಂತೆ ಇತರರು ಇದ್ದರು.