ಬಾಬುರಾಜೇಂದ್ರ ನಾಯಕರ ಹಗುರ ಮಾತು ಸಲ್ಲ

| Published : May 04 2024, 12:31 AM IST

ಸಾರಾಂಶ

ಡಾ.ಬಾಬುರಾಜೇಂದ್ರ ನಾಯಕ ಅವರು ಬಿಜೆಪಿ ಲೋಕಸಭೆ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ವೈದ್ಯರಾಗಿ ಯಾವ ರೀತಿ ಮಾತನಾಡಬೇಕು ಎಂಬ ಸೌಜನ್ಯ ಅವರಲ್ಲಿ ಇಲ್ಲ ಎಂದು ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಡಾ.ಬಾಬುರಾಜೇಂದ್ರ ನಾಯಕ ಅವರು ಬಿಜೆಪಿ ಲೋಕಸಭೆ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ವೈದ್ಯರಾಗಿ ಯಾವ ರೀತಿ ಮಾತನಾಡಬೇಕು ಎಂಬ ಸೌಜನ್ಯ ಅವರಲ್ಲಿ ಇಲ್ಲ ಎಂದು ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಕಿಡಿಕಾರಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ನಿಲ್ಲಲು ಅವಕಾಶ ಇದೆ. ಸಂಸದ ಜಿಗಜಿಣಗಿ ಅವರಿಗೆ ಪ್ರಜ್ಞೆ ಇಲ್ಲ ಎಂದಿದ್ದಾರೆ. ತಿಳಿವಳಿಕೆಯ ಕೊರತೆ ಇದೆ. ನಿಮಗೆ ತಿಳಿವಳಿಕೆಯೇ ಇಲ್ಲ. ಅವರು ನಿಲ್ಲಬಾರದು ಎಂದು ಎಲ್ಲೂ ಹೇಳಿಲ್ಲ. ಅವರು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡಿದರೂ ನಮ್ಮ ನಾಯಕರಾಗಲಿ, ಕಾರ್ಯಕರ್ತರು ಏನೂ ಹೇಳಿಲ್ಲ. ನಮ್ಮ ನಾಯಕರಿಗೆ ಆ ಜ್ಞಾನ ಇದೆ ಎಂದರು.

ಎರಡು ವರ್ಷದಲ್ಲಿ ಬಂದು ನೀವೇನು ದೊಡ್ಡ ಸಾಧನೆ ಮಾಡಿಲ್ಲ. ನಮ್ಮ‌ಪಕ್ಷದಲ್ಲಿ ಇದ್ದಿರಿ ಎಂದು ಕೆಲವು ಕಡೆ ಗುರುತಿಸುತ್ತಾರೆ. ಬಂಜಾರ ಸಮಾಜದ ನಾಯಕರು ಕೂಡ ಬಿಜೆಪಿ ಜೊತೆ ಇದ್ದಾರೆ. ಸಣ್ಣತನ ಮಾತನಾಡುವುದು ಸರಿಯಲ್ಲ. ನಡವಳಿಕೆಯನ್ನು ತಿದ್ದಿಕೊಳ್ಳಲಿ ಎಂದು ತಿಳಿ ಹೇಳಿದರು.

ಆರ್‌ಎಸ್‌ಎಸ್ ಸ್ವಯಂ ಸೇವಕ ಎಂದು ಹೇಳಿಕೊಳ್ಳುವ ಡಾಕ್ಟರ್ ಬಾಬು ರಾಜೇಂದ್ರ ನಾಯಕ ಅವರು ಯಾವ ಶಾಖೆಗೆ ಎಷ್ಟು ವರ್ಷ ಹೋಗಿದಾರೋ ಅಥವಾ ಎಷ್ಟು ತಿಂಗಳು ಹೋಗಿದಾರೋ ಎಂಬುವುದನ್ನು ತಿಳಿಸಬೇಕು ಎಂದು ಗೋಪಾಲ ಘಟಕಾಂಬಳೆ ಲೇವಡಿ ಮಾಡಿದರು.

ಪ್ರಶಾಂತ ರಾಠೋಡ ಮಾತನಾಡಿ, ನಾವು 20 ವರ್ಷಗಳಿಂದ ಬಿಜೆಪಿಯಲ್ಲೇ ಇದ್ದೇವೆ. ಪ್ರತಿ ತಾಂಡಾದಿಂದ ಶೇ 80ರಷ್ಟು ಬಂಜಾರ ಸಮುದಾಯ ಬಿಜೆಪಿ ಪರ ಮತ ಚಲಾಯಿಸಲಿದ್ದಾರೆ. ನಮ್ಮ ಸಮಾಜ ಯಾವಾಗಲೂ ಬಿಜೆಪಿ ಜೊತೆ ಇದೆ. ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಜೊತೆ, ಮೋದಿ ಅವರ ಜೊತೆ ಇರ್ತೆವೆ. ಮೋದಿ ಕಂದಾಯ ಗ್ರಾಮಗಳು ಎಂದು ಮಾಡಿದರು. ಆ ಋಣವನ್ನು ತೀರಿಸಲು ನಾವು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದರು.

ಭೀಮಶಿ ರಾಠೋಡ ಮಾತನಾಡಿದರು. ಈ ವೇಳೆ ಭೀಮಸಿಂಗ ರಾಠೋಡ, ಡಾ. ಅರವಿಂದ ನಾಯಿಕ, ಮಂತ್ರಿ ಚವ್ಹಾಣ, ಪಿಂಟು ರಾಠೋಡ, ತಾರಾಸಿಂಗ ನಾಯಿಕ,ವಿಜಯ ಜೋಶಿ ಸೇರಿದಂತೆ ಹಲವರು ಇದ್ದರು.