ರೈತನಿಗೆ ಪರಿಹಾರ ನೀಡದ ಹಿನ್ನೆಲೆ : ಭೂ ಸ್ವಾಧೀನ ಕಚೇರಿ ಜಪ್ತಿ

| Published : Sep 04 2025, 01:00 AM IST

ರೈತನಿಗೆ ಪರಿಹಾರ ನೀಡದ ಹಿನ್ನೆಲೆ : ಭೂ ಸ್ವಾಧೀನ ಕಚೇರಿ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಅಮಾನಿಕೆರೆ ಸರ್ವೆ ನಂ 52 , 1 ಎಕರೆ 08 ಗುಂಟೆ ಭೂಮಿಯನ್ನು ಕಾಲುವೆ ನಿರ್ಮಾಣ ಮಾಡಲು ಸರ್ಕಾರ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತನಿಗೆ ಭೂಸ್ವಾಧಿನ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು ಮೇಜು ಕುರ್ಚಿಯನ್ನು ಸೀಝ್ ಮಾಡಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಅಮಾನಿಕೆರೆ ಸರ್ವೆ ನಂ 52 , 1 ಎಕರೆ 08 ಗುಂಟೆ ಭೂಮಿಯನ್ನು ಕಾಲುವೆ ನಿರ್ಮಾಣ ಮಾಡಲು ಸರ್ಕಾರ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತನಿಗೆ ಭೂಸ್ವಾಧಿನ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು ಮೇಜು ಕುರ್ಚಿಯನ್ನು ಸೀಝ್ ಮಾಡಿದರು. ತುಮಕೂರಿನ ಹೇಮಾವತಿ ಭೂ ಸ್ವಾಧೀನ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ನ ಅಧಿಕಾರಿಗಳು ರೈತ ಹಾಗೂ ರೈತನ ಪರ ವಕೀಲರು ಕಚೇರಿಗೆ ತೆರಳಿ ಅಲ್ಲಿದ್ದ ಮೇಜು ಕುರ್ಚಿ ಸೇರಿದಂತೆ ಹಲವಾರು ಪೀಠೋಪಕರಣಗಳನ್ನು ತಾವು ತಂದಿದ್ದ ಲಾರಿಯಲ್ಲಿ ತುಂಬಿಸಿದರು. ರೈತ ಭಾನು ಪ್ರತಾಪ್ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಪರಿಹಾರದ ಹಣವನ್ನು ಅಧಿಕಾರಿಗಳು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅದಕ್ಕಿಂತ ಮೊದಲು ಆದ ಹಲವಾರು ಪ್ರಕರಣಗಳನ್ನು ಇತ್ಯರ್ಥ ಗೊಳಿಸಿ ನಮ್ಮ ಪ್ರಕರಣವನ್ನು ಉದಾಸಿನತೆ ಮಾಡಿರುವುದು ನಮಗೆ ಇವರು ಲಂಚದ ಹಣಕ್ಕಾಗಿ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದ್ದ ಭೂಮಿಯನ್ನು ಪಡೆದುಕೊಂಡು ಕೃಷಿ ಮಾಡಲು ಸಾಧ್ಯವಿಲ್ಲದೆ ನಾವು ಕೈ ಸಾಲ ಮಾಡಿಕೊಂಡಿದ್ದೇವೆ. ಈ ಹಣವನ್ನು ನಂಬಿಕೊಂಡು ಬದುಕುವುದು ಕಷ್ಟ ಆಗುತ್ತಿದೆ. ಅದಕ್ಕಾಗಿ ನ್ಯಾಯಾಲಯ ಇಂತಹ ಆದೇಶ ಮಾಡಿರುವುದು ಅಭಿನಂದನ ವಿಚಾರ ಎಂದರು.

ಸ್ಥಳದಲ್ಲಿದ್ದ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳ ಜೊತೆ ಮಾತಾಡಿ 30 ಲಕ್ಷರು.ಗಳನ್ನ ಕೋರ್ಟಿಗೆ ಠೇವಣಿ ಮಾಡಿದ ನಂತರ ರೈತರು ಮತ್ತು ವಕೀಲರಿಗೆ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು ಹಾಗೂ ರೈತರು ವಾಹನಕ್ಕೆ ತುಂಬಿದ್ದ ಮೇಜು ಕುರ್ಚಿಯನ್ನು ವಾಪಸ್ ನೀಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಕಕ್ಷಿದಾರರ ಪರ ವಕೀಲರಾದ ಚಂದ್ರೇಗೌಡ ತಮ್ಮಣ್ಣಗೌಡ. ಬಿಎಸ್ ಹರ್ಷ. ಪ್ರಕಾಶ್, ಚಂದ್ರಯ್ಯ . ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಇದ್ದರು.