ಸಾರಾಂಶ
ಕನ್ನಡಪ್ರಭವಾರ್ತೆ ಹನೂರು
ತಾಲೂಕಿನ ಡಿಎಂ ಸಮುದ್ರ ಗ್ರಾಮ ಹಾಗೂ ಎಂಟಿ ದೊಡ್ಡಿಯಲ್ಲಿ ತೆರೆದಿರುವಗೋಶಾಲೆಗೆ ಸಮರ್ಪಕವಾಗಿ ಮೇವು ನೀಡದ ಹಿನ್ನಲೆ ಜಾನುವಾರುಗಳಿಗೆ ಮೇವಿಲ್ಲ ಎಂದು ಅಧಿಕಾರಿಗಳ ವಿರುದ್ದ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೋಶಾಲೆ ಅವ್ಯವಸ್ಥೆ: ಎರಡು ಗ್ರಾಮದಲ್ಲೂ ಕೂಡ 1500ಕ್ಕೂ ಜಾನುವಾರುಗಳಿದ್ದು ಇಲ್ಲಿಯ ರೈತರು ಗೋಶಾಲೆಗಳನ್ನು ತೆರೆಯುವಂತೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದ ಬೆನ್ನಲ್ಲೆ ಶುಕ್ರವಾರದಿಂದ ಡಿಎಂ ಸಮುದ್ರ ಹಾಗೂ ಎಂ ಟಿ ದೂಡ್ಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಜಿಲ್ಲಾಡಳಿತ ಗೋಶಾಲೆಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಇಲ್ಲಿನ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನೀಡುತ್ತಿರುವ ಮೇವು ಜಾನುವಾರುಗಳಿಗೆ ಸಾಕಾಗುತ್ತಿಲ್ಲ ಜೊತೆಗೆ ಇಲ್ಲಿನ ಉಸ್ತುವಾರಿ ಅಧಿಕಾರಿಗಳು ಸಹ ರೈತರಿಗೆ ಸ್ಪಂದಿಸುತ್ತಿಲ್ಲ ನಿಯಮನುಸಾರವಿಲ್ಲದೆ ಜಾನುವಾರುಗಳಿಗೆ ಅಸಮರ್ಪಕವಾಗಿ ಮೇವು ನೀಡುತ್ತಿರುವುದರಿಂದ ಕೂಡಲೇ ಸಂಬಂಧಪಟ್ಟ ತಾಲೂಕು ಮಟ್ಟದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಮರ್ಪಕವಾಗಿ ಇಲ್ಲಿ ತೆರೆದ ತೆರೆಯಲಾಗಿರುವ ಗೋಶಾಲೆಗಳಿಗೆ ಮೇವು ನಿರಂತರವಾಗಿ ಸರಬರಾಜು ಮಾಡುವ ಮೂಲಕ ಜಾನುವಾರುಗಳ ಉಳಿವಿಗಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಅಧಿಕಾರಿ ನೇಮಕ ಮಾಡಲು ಒತ್ತಾಯಈ ಭಾಗದಲ್ಲಿ ತೆರೆಯಲಾಗಿರುವ ಗೋಶಾಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಜಿಲ್ಲಾಡಳಿತ ಸಮರ್ಥ ಅಧಿಕಾರಿಯನ್ನು ಇಲ್ಲಿಗೆ ನೇಮಕ ಮಾಡಿ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಸರಬರಾಜು ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತವನ್ನು ರೈತರು ಒತ್ತಾಯಿಸಿದರು. ರೈತರಾದ ಲಕ್ಷ್ಮಿ,ಮಂಜೇಶ್,ಕುಳ್ಳಪ್ಪ, ರಾಜು , ಮಾದಯ್ಯ, ಮುತ್ತ ಇನ್ನಿತರರು ಇದ್ದರು.