ಲೋಕಸಭೆಗೆ ಬ್ಯಾಡಗಿ ಕ್ಷೇತ್ರದಲ್ಲಿ ಶೇ. 80.31 ಮತದಾನ

| Published : May 08 2024, 01:01 AM IST

ಲೋಕಸಭೆಗೆ ಬ್ಯಾಡಗಿ ಕ್ಷೇತ್ರದಲ್ಲಿ ಶೇ. 80.31 ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮತಗಟ್ಟೆ ಸಂಖ್ಯೆ 103 (ಕಾಗಿನೆಲೆ) ಹಾಗೂ 211-(ಹಳೇ ಗುಂಗರಗೊಪ್ಪ) ತಾಂತ್ರಿಕ ದೋಷ ಕಾರಣದಿಂದ ಅರ್ಧಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದನ್ನು ಹೊರತುಪಡಿಸಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಬ್ಯಾಡಗಿ ಮತಕ್ಷೇತ್ರದಾದ್ಯಂತ ಮಂಗಳವಾರ ಶೇ.80.31 ರಷ್ಟು (ಸಂಜೆ 6 ಗಂಟೆ ಹೊತ್ತಿಗೆ) ಮತದಾನವಾಗಿದೆ.

ಬ್ಯಾಡಗಿ: ಮತಗಟ್ಟೆ ಸಂಖ್ಯೆ 103 (ಕಾಗಿನೆಲೆ) ಹಾಗೂ 211-(ಹಳೇ ಗುಂಗರಗೊಪ್ಪ) ತಾಂತ್ರಿಕ ದೋಷ ಕಾರಣದಿಂದ ಅರ್ಧಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದನ್ನು ಹೊರತುಪಡಿಸಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಬ್ಯಾಡಗಿ ಮತಕ್ಷೇತ್ರದಾದ್ಯಂತ ಮಂಗಳವಾರ ಶೇ.80.31 ರಷ್ಟು (ಸಂಜೆ 6 ಗಂಟೆ ಹೊತ್ತಿಗೆ) ಮತದಾನವಾಗಿದೆ.2 ಲಕ್ಷಕ್ಕೂ ಅಧಿಕ ಮತದಾರರು: ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 107609 ಪುರುಷರು ಹಾಗೂ 104955 ಮಹಿಳೆಯರು ಹಾಗೂ ಇತರೇ 3 ಮತದಾರರು ಸೇರಿ ಒಟ್ಟು 212567 ಜನ ಮತದಾರರಿದ್ದು, ಒಟ್ಟು 242 ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.

ಗಣ್ಯರಿಂದ ಮತದಾನ: ಕನಕಗುರುಪೀಠದ ನಿರಂಜಾನನಂದಶ್ರೀ ಕಾಗಿನೆಲೆಯಲ್ಲಿ, ಶಾಸಕ ಬಸವರಾಜ ಶಿವಣ್ಣನವರ ತಾಲೂಕಿನ ಬನ್ನಿಹಳ್ಳಿಯಲ್ಲಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮೋಟೆಬೆನ್ನೂರಿನಲ್ಲಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಮತ್ತು ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಬಸವೇಶ್ವರ ನಗರದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.