ಸಾರಾಂಶ
ಬ್ಯಾಡಗಿ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಂದು ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಪ್ರಸಕ್ತ ಸೀಸನ್ನಲ್ಲಿ ಮೊದಲ ಬಾರಿಗೆ ಒಂದು ಲಕ್ಷ ಚೀಲ ದಾಟಿದೆ.
ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಒಂದು ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಪ್ರಸಕ್ತ ಸೀಸನ್ನಲ್ಲಿ ಮೊದಲ ಬಾರಿಗೆ ಒಂದು ಲಕ್ಷ ಚೀಲ ದಾಟಿದೆ.
ಪ್ರತಿ ವರ್ಷ ದೀಪಾವಳಿ ಬಳಿಕ ಆರಂಭವಾಗುವ ಮೆಣಸಿನಕಾಯಿ ಸೀಸನ್ ಇಲ್ಲಿವರೆಗೂ 40ರಿಂದ 50 ಸಾವಿರ ಆಸು ಪಾಸಿನಲ್ಲಿತ್ತು, ಆದರೆ ಇಂದು 1.29 ಲಕ್ಷ ಆವಕವಾಗಿದ್ದು 3 ತಳಿಯ ದರದಲ್ಲಿ ಸ್ಥಿರತೆ ಕಂಡು ಬಂದಿದೆ.ಕಳೆದ ಕೆಲ ದಿನಗಳಿಂದ ಮೆಣಸಿನಕಾಯಿ ಆವಕದ ಕೊರತೆ ಎದುರಿಸುತ್ತಿದ್ದ ಮಾರುಕಟ್ಟೆ ಮೆಣಸಿನಕಾಯಿದಿಂದ ಭರ್ತಿ ಆಗಿತ್ತು. ಉಳಿದಂತೆ ಸೋಮವಾರ ಆವಕ ಲಕ್ಷದ ಗಡಿದಾಟಿದ್ದರೂ ಸಹ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣದೇ ಡಬ್ಬಿ, ಕಡ್ಡಿ, ಗುಂಟೂರ ತಳಿ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಂಡು ಬಂದಿದೆ.ಮಾರುಕಟ್ಟೆ ದರ: ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ 2959 ಗರಿಷ್ಠ 35559 ಸರಾಸರಿ 28959, ಡಬ್ಬಿತಳಿ ಕನಿಷ್ಠ 3169 ಗರಿಷ್ಠ 42399 ಸರಾಸರಿ 30009, ಗುಂಟೂರು ತಳಿ ಕನಿಷ್ಠ 1009 ಗರಿಷ್ಠ 16759 ಸರಾಸರಿ 14509 ರು.ಗಳಿಗೆ ಮಾರಾಟವಾಗಿವೆ.