ಭಾಗ್ಯವಂತಿ ದೇವಸ್ಥಾನಕ್ಕೆ ಬಾದಾಮಿ ಶಾಸಕ ಬಿವಿ ಚಿಮ್ಮನಕಟ್ಟಿ ಭೇಟಿ

| Published : Jan 16 2024, 01:50 AM IST

ಸಾರಾಂಶ

ಘತ್ತರಗಿಯ ಭಾಗ್ಯವಂತಿ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು ರಾಜ್ಯ ಹೊರ ರಾಜ್ಯಗಳ ಭಕ್ತರನ್ನು ಹೊಂದಿದೆ. ಹೀಗಾಗಿ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡುತ್ತೇನೆ: ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಭರವಸೆ

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯ ಭಾಗ್ಯವಂತಿ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು ರಾಜ್ಯ ಹೊರ ರಾಜ್ಯಗಳ ಭಕ್ತರನ್ನು ಹೊಂದಿದೆ. ಹೀಗಾಗಿ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವಂತೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡುತ್ತೇನೆ ಎಂದು ಬಾದಾಮಿ ಮತಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.

ಕುಟುಂಬ ಸಮೇತರಾಗಿ ಸಂಕ್ರಾಂತಿ ನಿಮಿತ್ತ ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನ ಹಾಗೂ ಘತ್ತರಗಿ ಭಾಗ್ಯವಂತಿ ದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಭಾಗ್ಯವಂತಿ ದೇವಿಗೆ ಆಗಾಗ ಕುಟುಂಬ ಸಮೇತರಾಗಿ ಭೇಟಿ ನೀಡುತ್ತೇನೆ. ಇಲ್ಲಿಗೆ ಭೇಟಿ ನೀಡಿದರೆ ನಮಗೆಲ್ಲ ಮನಸ್ಸಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಭಕ್ತರ ಆಶೋತ್ತರಗಳನ್ನು ಈಡೆರಿಸುವ ತಾಯಿಯ ದರ್ಶನ ಮಾಡಿದ್ದು ಖುಷಿ ತಂದಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಭೀಮಚಂದ್ರ ಚಿಮ್ಮನಕಟ್ಟಿ, ರತಮ್ಮ ಚಿಮ್ಮನಕಟ್ಟಿ, ರೋಹಿಣಿ ಚಿಮ್ಮನಕಟ್ಟಿ, ಪ್ರಮುಖರಾದ ರಾಜು ಚವ್ಹಾಣ, ಸಂತೋಷ ಶೆಟ್ಟಿ, ಅನೀಲ ಸಿಂಪಿ, ಗಂಗಾಧರ ಕರಭಂಟ್ನಾಳ ಸೇರಿದಂತೆ ಅನೇಕರು ಇದ್ದರು.