ಬಾದಾಮಿ ಟಿಎಪಿಸಿಎಂಎಸ್‌: ತಿಮ್ಮಣ್ಣ ಮೆಳ್ಳಿ ಅಧ್ಯಕ್ಷ, ಬಸವರಾಜ ಹಿರೇಹಾಳ ಉಪಾಧ್ಯಕ್ಷ

| Published : Feb 15 2024, 01:33 AM IST

ಬಾದಾಮಿ ಟಿಎಪಿಸಿಎಂಎಸ್‌: ತಿಮ್ಮಣ್ಣ ಮೆಳ್ಳಿ ಅಧ್ಯಕ್ಷ, ಬಸವರಾಜ ಹಿರೇಹಾಳ ಉಪಾಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ: ಪಟ್ಟಣದ ಬಾದಾಮಿ ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ತಿಮ್ಮಣ್ಣ ರಾಯಪ್ಪ ಮೆಳ್ಳಿ ಸತತ 9ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ ಮತ್ತು ಉಪಾಧ್ಯಕ್ಷರಾಗಿ ಬಸವರಾಜ ಚನ್ನಬಸಪ್ಪ ಹಿರೇಹಾಳ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಪಟ್ಟಣದ ಬಾದಾಮಿ ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ತಿಮ್ಮಣ್ಣ ರಾಯಪ್ಪ ಮೆಳ್ಳಿ ಸತತ 9ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ ಮತ್ತು ಉಪಾಧ್ಯಕ್ಷರಾಗಿ ಬಸವರಾಜ ಚನ್ನಬಸಪ್ಪ ಹಿರೇಹಾಳ ಅವಿರೋಧ ಆಯ್ಕೆಯಾದರು.

ಪಟ್ಟಣದ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಎಸ್.ಎಂ.ಕೆಲೂಡಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ನೂತನ ಅಧ್ಯಕ್ಷ ತಿಮ್ಮಣ್ಣ ಮೆಳ್ಳಿ ಮಾತನಾಡಿ, ಮತ್ತೊಂದು ಅವಧಿಗೆ ಅಧ್ಯಕ್ಷನಾಗಲು ಸಂಘದ ಎಲ್ಲ ನಿರ್ದೇಶಕರ ಸಹಕಾರ ಕಾರಣ. 33 ವರ್ಷಗಳ ಕಾಲ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ, ಮುಂದೆಯೂ ನಿರ್ದೇಶಕರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರಮಿಸುವೆ ಎಂದು ಸಂಘದ ನೂತನ ಅಧ್ಯಕ್ಷ ಟಿ.ಆರ್.ಮೆಳ್ಳಿ ಹೇಳಿದರು.

ನಿರ್ದೇಶಕರಾದ ಗಂಗಯ್ಯ ಸರಕಾರ, ಮಾಗುಂಡಪ್ಪ ಮಣ್ಣೂರ, ಪ್ರಕಾಶಗೌಡ ತಿರಕನಗೌಡ್ರ, ಅಡಿವೆಪ್ಪ ಢಾಣಕಶಿರೂರ, ಶಿವಪ್ಪ ಮೇಟಿ, ರಾಘವೇಂದ್ರ ಮೆಳ್ಳಿ, ಶಂಕ್ರವ್ವ ಹುಲ್ಲೂರ, ಪುಷ್ಪಾ ಹಿರೇಮಠ, ಶಂಕ್ರಪ್ಪ ಗುಡಿಮನಿ, ರಾಮಪ್ಪ ಕೊಳ್ಳನ್ನವರ. ವ್ಯವಸ್ಥಾಪಕ ಆರ್.ಬಿ.ಬೂದಿ ಇತರರು ಇದ್ದರು.