ಬಾಗಲಕೋಟೆ: ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಯೋಧ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಆಡಗಲ್ ಗ್ರಾಮದ ದುರ್ಗಪ್ಪ ಮಾದರ ಮೃತ ಯೋಧ.

ಬಾಗಲಕೋಟೆ: ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಯೋಧ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಆಡಗಲ್ ಗ್ರಾಮದ ದುರ್ಗಪ್ಪ ಮಾದರ ಮೃತ ಯೋಧ. 2010ರಲ್ಲಿ ಸೈನ್ಯಕ್ಕೆ ಸೇರಿದ್ದ ದುರ್ಗಪ್ಪ ಬೆಂಗಳೂರಿನ ಎಂಇಜಿ ಸೆಂಟರ್‌ನಲ್ಲಿ ತರಬೇತಿ ಪಡೆದು 2012ರಿಂದ‌ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು, ಅಲಹಾಬಾದ್ ಬಳಿಕ ದೆಹಲಿ ಸೇನಾ ರೆಜಿಮೆಂಟ್ ನ ಮೀರತ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಕರ್ತವ್ಯದ ಮೇಲೆ ಹೊರಟಿದ್ದಾಗ ವಾಹನ ಅಪಘಾತವಾಗಿ ಗಂಭೀರ ಗಾಯಗೊಂಡು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.ದುರ್ಗಪ್ಪ ಗ್ರಾಮದ ಕೋನಮ್ಮದೇವಿ ಕಾರ್ತಿಕೋತ್ಸವ ನಿಮಿತ್ತ ಡಿ.10ರಿಂದ ಗ್ರಾಮಕ್ಕೆ ಬರಲು ರಜೆ ಕೂಡ ಪಡೆದಿದ್ದರು. ಸೋಮವಾರ ಸಂಜೆ ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಬರಲಿದೆ. ಮೃತಯೋಧನಿಗೆ ಪತ್ನಿ ಪೂಜಾ, ಸಹೋದರಿ ಹಾಗೂ ತಾಯಿ ಇದ್ದಾರೆ.