ಸಚಿವ ಡಿ ಸುಧಾಕರ್ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಭೆ

| Published : Jul 16 2024, 01:35 AM IST / Updated: Jul 16 2024, 05:50 AM IST

ಸಚಿವ ಡಿ ಸುಧಾಕರ್ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಭೆಯನ್ನು ಸಚಿವ ಡಿ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

 ಹಿರಿಯೂರು:  ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಗರ್ ಹುಕುಂ ಸಕ್ರಮೀಕರಣ ಸಭೆಯನ್ನು ಸಚಿವ ಡಿ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಅನಧಿಕೃತ ಭೂ ಸಾಗುವಳಿ ಸಕ್ರಮೀಕರಣದಡಿ ಸಲ್ಲಿಸಿದ ನಮೂನೆ 53ರಲ್ಲಿ 254 ಮನವಿ ಬಾಕಿ ಇದ್ದು ನಮೂನೆ 57 ರಲ್ಲಿ 18116 ಮನವಿಗಳು ಸ್ವೀಕೃತವಾಗಿದ್ದು, 2215 ಮನವಿಗಳು ವಿಲೇಗೊಂಡಿದ್ದು 15901 ಮನವಿಗಳು ವಿಲೇವಾರಿಗಾಗಿ ಬಾಕಿಯಿವೆ. ಕಂದಾಯ ಇಲಾಖೆ ಭೂ ಮಂಜೂರಾತಿ ತಂತ್ರಾoಶದಲ್ಲಿ ಅರ್ಹ ಪ್ರಕರಣಗಳನ್ನು ನಮೂದಿಸಿ ಸಮಿತಿಯ ಮುಂದೆ ಮಂಡಿಸಲು ಹಾಗೂ ಅನರ್ಹ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ವಿಲೇಗೊಳಿಸಲು ಅನುಮೋದನೆ ಪಡೆಯಲು ಕ್ರಮವಹಿಸಬಹುದಾಗಿದೆ ಎಂದು ಸದಸ್ಯ ಕಾರ್ಯದರ್ಶಿ ಹಾಗೂ ತಹಸೀಲ್ದಾರ್ ರಾಜೇಶ್ ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಏಕನಾಥ್, ಸಮಿತಿಯ ಸದಸ್ಯರಾದ ಡಾ. ಜೆ.ಆರ್. ಸುಜಾತಾ, ಕೆ ರಂಗಸ್ವಾಮಿ, ಕಣುಮಪ್ಪ ಮುಂತಾದವರು ಉಪಸ್ಥಿತರಿದ್ದರು.