ಸೆ.3ಕ್ಕೆ ವೀರಭದ್ರೇಶ್ವರ ಜಯಂತಿ ಬಾಗೋಜಿಕೊಪ್ಪ ಶ್ರೀಗಳ ಕರೆ

| Published : Aug 19 2024, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸೆ.3ರಂದು ಮನೆ ಮನೆಗಳಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಗರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸೆ.3ರಂದು ಮನೆ ಮನೆಗಳಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಶ್ರೀ ವೀರಭದ್ರೇಶ್ವರ ಜಯಂತಿ ಉತ್ಸವ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಗರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾದ್ರಪದ ಮಾಸದ ಮೊದಲನೇ ಮಂಗಳವಾರ ಸೆ.3ಕ್ಕೆ ಎಲ್ಲರೂ ತಪ್ಪದೆ ಶ್ರೀ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಿ. ವೀರಶೈವರ ಮೂಲ ಪುರುಷ ವೀರಭದ್ರಸ್ವಾಮಿ. ಇಡೀ ರಾಜ್ಯ, ದೇಶ, ವಿದೇಶಗಳಲ್ಲಿಯೂ ಸಹ ಶ್ರೀ ವೀರಭದ್ರೇಶ್ವರ ಜಯಂತಿ ಅದ್ಧೂರಿಯಾಗಿ ಆಚರಿಸಿಕೊಂಡು ಬಂದಿದೆ. ಈ ವರ್ಷವೂ ಎಲ್ಲರೂ ತಪ್ಪದೆ ಆಚರಿಸಬೇಕು ಎಂದು ಮನವಿ ಮಾಡಿದರು.

ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ವೀರಭದ್ರ ಮಹಾಸ್ವಾಮಿಯ ಜಯಂತಿಯನ್ನು ಜಾತಿ, ಮತ, ಪಂಥ, ಪಂಗಡ ಮೀರಿ ಎಲ್ಲರೂ ಆಚರಿಸುವ ಅವಶ್ಯಕತೆ ಇದೆ. ವೀರಶೈವ ಲಿಂಗಾಯತದಲ್ಲಿ ಸುಮಾರು 90 ರಷ್ಟು ಜನ ವೀರಭದ್ರೇಶ್ವರನನ್ನು ಆರಾಧಿಸುತ್ತಾರೆ. ಮನೆ ಮನೆಯಲ್ಲಿ, ದೇವಸ್ಥಾನ, ಮಠಗಳಲ್ಲಿ ವೀರಭದ್ರೇಶ್ವರ ಆಚರಿಸಿ ಎಂದ ಅವರು, ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿಯವರ ಪರಿಶ್ರಮ ಎಲ್ಲ ಕಡೆ ವೀರಭದ್ರೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತ ಬಂದಿದೆ ಎಂದು ತಿಳಸಿದರು.

ಉತ್ಸವ ಸಮಿತಿಯ ರಾಜ್ಯಾಧ್ಯಕ್ಷರಾದ ಬಳ್ಳಾರಿ ಕಲ್ಯಾಣ ಮಠದ ಶ್ರೀ ಕಲ್ಯಾಣ ಮಹಾಸ್ವಾಮೀಜಿ ಅವರು ವೀರಭದ್ರೇಶ್ವರ ಜಯಂತಿ ಉತ್ಸವಕ್ಕೆ ವಿಶೇಷವಾದ ಕಾಳಜಿ ವಹಿಸಿ ಕಾರ್ಯಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.