ಬೈಕಂಪಾಡಿ: ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ

| Published : Sep 12 2024, 01:46 AM IST

ಸಾರಾಂಶ

ಬೈಕಂಪಾಡಿಯ ಇಂದಿರಾ ಮಾಧವ ಸಭಾಂಗಣದಲ್ಲಿ ನಡೆದ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಭರತ್‌ ಶೆಟ್ಟಿ ಮನವಿ ಪತ್ರ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಬೈಕಂಪಾಡಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸಲು ಮನವಿಯನ್ನು ನೀಡಲಾಗಿದ್ದು ಶಿಕ್ಷಣ ಮಂತ್ರಿಗಳಲ್ಲಿ ಮಾತುಕತೆ ನಡೆಸಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಆಂಗ್ಲ ಮಾಧ್ಯಮವನ್ನು ಕೂಡ ಆರಂಭಿಸಲು ಅನುಮತಿಯನ್ನು ಪಡೆಯಲಾಗುವುದು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದರು.

ಬೈಕಂಪಾಡಿ ಮೊಗವೀರ ಮಹಾಸಭಾದ ಆಡಳಿತಕ್ಕೆ ಒಳಪಟ್ಟಿರುವ 120 ವರ್ಷದ ಐತಿಹಾಸಿಕ ಶಾಲೆಯ ಪುನರ್ನವೀಕರಣ ಸಲುವಾಗಿ ಬೈಕಂಪಾಡಿಯ ಇಂದಿರಾ ಮಾಧವ ಸಭಾಂಗಣದಲ್ಲಿ ನಡೆದ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನಿತಾ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಮಹಾಸಭಾ ಅಧ್ಯಕ್ಷ ವಸಂತ ಅಮೀನ್, ಮನಪಾ ಸದಸ್ಯರಾದ ಸುಮಿತ್ರ ಕರಿಯ, ಶಿಕ್ಷಣ ತಜ್ಞ ವಾಸುದೇವ ಐತಾಳ್ ಪಿ., ವಿವಿಧ ಕಂಪನಿಯ ಅಧಿಕಾರಿಗಳು, ಮಹಾಸಭಾದ ಗುರಿಕಾರರು, ಸದಸ್ಯರು ಉಪಸ್ಥಿತರಿದ್ದರು.