ಸಾರಾಂಶ
ಬೈಲೂರು ಕೆಳಪೇಟೆಯಲ್ಲಿ ಶ್ರೀಮತಿ ಜಲಜ ಮತ್ತು ಶ್ರೀ ಗೋವಿಂದ ವಾಗ್ಳೆ ಸ್ಮರಣಾರ್ಥ ಅವರ ಪುತ್ರರಾದ ಉಡುಪಿ ಗೀತಾಂಜಲಿ ಸಮೂಹ ಉದ್ಯಮ ಸಂಸ್ಥೆಗಳ ಪಾಲುದಾರರಾದ ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ , ಹರೀಶ್ ವಾಗ್ಳೆ, ಸಂತೋಷ್ ವಾಗ್ಳೆ ಅವರು ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ವಿ. ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳಇಲ್ಲಿನ ಬೈಲೂರು ಕೆಳಪೇಟೆಯಲ್ಲಿ ಶ್ರೀಮತಿ ಜಲಜ ಮತ್ತು ಶ್ರೀ ಗೋವಿಂದ ವಾಗ್ಳೆ ಸ್ಮರಣಾರ್ಥ ಅವರ ಪುತ್ರರಾದ ಉಡುಪಿ ಗೀತಾಂಜಲಿ ಸಮೂಹ ಉದ್ಯಮ ಸಂಸ್ಥೆಗಳ ಪಾಲುದಾರರಾದ ರಾಮಕೃಷ್ಣ ವಾಗ್ಳೆ, ಲಕ್ಷ್ಮಣ ವಾಗ್ಳೆ, ರಮೇಶ್ ವಾಗ್ಳೆ , ಹರೀಶ್ ವಾಗ್ಳೆ, ಸಂತೋಷ್ ವಾಗ್ಳೆ ಅವರು ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಶಾಸಕ ವಿ. ಸುನೀಲ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ನಂತರ ಬೈಲೂರು ಶ್ರೀ ರಾಮ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ವಾಗ್ಳೆ ಕುಟುಂಬಸ್ಥರು ಬೈಲೂರು ಪರಿಸರದಲ್ಲಿ ನಿರಂತರವಾಗಿ ಒಂದಿಲ್ಲೊಂದು ರೀತಿಯಲ್ಲಿ ಸೇವೆ ನೀಡುತ್ತಿದ್ದಾರೆ. ಈಗ ಸುಂದರವಾದ ತಂಗುದಾಣದ ಮೂಲಕ ಹೆತ್ತವರ ಹೆಸರು ಶಾಶ್ವತಗೊಳಿಸಿದ್ದಾರೆ. ಇದು ಇತರರಿಗೂ ಆದರ್ಶವಾಗಿದೆ ಎಂದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಲೂಕಿನ ನಿಕಟಪೂರ್ವ ಜಿಪಂ ಸದಸ್ಯ ಸುಮಿತ್ ಶೆಟ್ಟಿ ಶುಭ ಹಾರೈಸಿದರು. ನೀರೆ ಗ್ರಾಪಂ ಅಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಕೈಗಾರಿಕೆ - ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಬೈಲೂರು ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ಸೀತಾರಾಮ ಭಟ್, ಗ್ರಾಪಂ ಸದಸ್ಯ ಹೈದರಾಲಿ, ಪಳ್ಳಿ ಅಡಪಾಡಿ ದೇವಸ್ಥಾನದ ಧರ್ಮದರ್ಶಿ ಪುಂಡಲೀಕ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ ವಾಗ್ಳೆ ಸ್ವಾಗತಿಸಿ, ಸಂತೋಷ್ ವಾಗ್ಳೆ ವಂದಿಸಿದರು. ಲಾವಣ್ಯ ಲಕ್ಷ್ಮಣ ವಾಗ್ಳೆ ಪ್ರಾರ್ಥಿಸಿದರು. ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು