ಜಿಲ್ಲಾದ್ಯಂತ ತ್ಯಾಗ, ಬಲಿದಾನ ಸಂಕೇತ ಬಕ್ರೀದ್ ಸಂಭ್ರಮ

| Published : Jun 18 2024, 12:46 AM IST

ಜಿಲ್ಲಾದ್ಯಂತ ತ್ಯಾಗ, ಬಲಿದಾನ ಸಂಕೇತ ಬಕ್ರೀದ್ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ಮುಸ್ಲಿಂ ಧರ್ಮೀಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ದಾವಣಗೆರೆ ನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಪುಟ್ಟ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಂಡರು.

- ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ, ಅಸಹಾಯಕರಿಗೆ ನೆರವು ।

- ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದ ಎಸ್‌ಪಿ ಉಮಾ ಪ್ರಶಾಂತ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಜೂ.17 ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ಮುಸ್ಲಿಂ ಧರ್ಮೀಯರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಪುಟ್ಟ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಂಡರು.

ಹಳೇ ಪಿ.ಬಿ. ರಸ್ತೆಯ ಈದ್ಗಾ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್‌ಪಿ ವಿಜಯಕುಮಾರ ಎಂ.ಸಂತೋಷ ಭೇಟಿ ನೀಡಿ, ಮುಸ್ಲಿಂ ಧರ್ಮೀಯರಿಗೆ ಹಬ್ಬದ ಶುಭ ಕೋರಿ, ಮಾತನಾಡಿದರು.

ಪಿ.ಬಿ. ರಸ್ತೆಯ ಈದ್ಗಾ ಮೈದಾನ, ಮಾಗಾನಹಳ್ಳಿ ರಸ್ತೆಯ ರಜಾವುಲ್ ಮುಸ್ತಫಾ ನಗರದ ಈದ್ಗಾ ಮೈದಾನ, ಕೈಗಾರಿಕಾ ಪ್ರದೇಶ ಶ್ರೀರಾಮ ನಗರದ ಮೈದಾನಗಳಿಗೆ ದ್ವಿಚಕ್ರ ವಾಹನ, ಆಟೋ, ಕಾರು, ಸೈಕಲ್‌, ಅಪೆ ವಾಹನಗಳಲ್ಲಿ ಸಾವಿರಾರು ಮುಸ್ಲಿಂ ಧರ್ಮೀಯರು ತೆರಳಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಮುಸ್ಲಿಂ ಗುರುಗಳು ಪ್ರವಚನ ನೀಡಿ, ಜೀವನದಲ್ಲಿ ತ್ಯಾಗ, ಬಲಿದಾನ ಮಾಡುವಂತಹ ಸಂದರ್ಭಗಳು ಎದುರುತ್ತವೆ. ಎಲ್ಲರ ಬದುಕು ಹಸನಾಗಲು ತ್ಯಾಗವೂ ಅತಿ ಮುಖ್ಯ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬಾಳಬೇಕು. ಅಸಹಾಯಕರು, ಬಡವರಿಗೆ ಕೈಲಾದ ನೆರವಿನಹಸ್ತ ಚಾಚಬೇಕು ಎಂದು ಹೇಳಿದರು.

ಸಾಮೂಹಿಕ ಪ್ರಾರ್ಥನೆ ನಂತರ ಅಸಹಾಯಕರು, ಬಡವರಿಗೆ ಮುಸ್ಲಿಂ ಧರ್ಮೀಯರು ದಾನ ಮಾಡಿದರು. ನೆರೆ ಹೊರೆಯವರು, ತಮ್ಮ ಶಕ್ತ್ಯಾನುಸಾರ ಬಡವರಿಗೆ ಆಹಾರ, ನಗದು ಇತರೆ ವಸ್ತುಗಳನ್ನು ದಾನ ಮಾಡಿದರು. ಹಬ್ಬಕ್ಕೆ ಹೊಸ ಬಟ್ಟೆ ಧರಿಸಿ, ಮಕ್ಕಳಾದಿಯಾಗಿ ಸಂಭ್ರಮದಲ್ಲಿದ್ದರು. ಪ್ರಾರ್ಥನೆ ನಂತರ ತಮ್ಮ ಮನೆಗಳಲ್ಲಿ ಬಾಡೂಟ ಸೇರಿದಂತೆ ಭಕ್ಷ್ಯ ಭೋಜನ ಮಾಡಿ, ಸಂಭ್ರಮದಲ್ಲಿ ಮಿಂದೆದ್ದರು.

ಮೌಲಾನಾ ನಸೀರ್ ಅಹಮ್ಮದ್ ಮಿಸ್ಬಾಯಿ ಪ್ರವಚನ ನೀಡಿದರು. ತಂಜಿಮ್ ಅಧ್ಯಕ್ಷ ದಾದಾಪೀರ್ ಸೇಟ್‌, ಉಪಾಧ್ಯಕ್ಷ ಎಸ್.ಕೆ.ಅಮ್ಜದ್‌ವುಲ್ಲಾ, ಖಜಾಂಚಿ ದಾದಾಪೀರ್‌, ಶಂಶುದ್ದೀನ್ ರಜ್ವಿ, ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್‌, ಅಬ್ದುಲ್ ಲತೀಫ್ ವಾಲೀಕಾರ್‌, ಎ.ಬಿ.ರಹೀಂ, ಕಬೀರ್ ಖಾನ್, ಅಯೂಬ್ ಪೈಲ್ವಾನ್, ಜೆ.ಅಮಾನುಲ್ಲಾ ಖಾನ್, ಮಹಮ್ಮದ್ ಜಬೀ ಟೈಲ್ಸ್‌, ಇಮ್ತಿಯಾಜ್ ಬೇಗ್‌, ನೂರ್ ಅಹಮ್ಮದ್‌, ವಕೀಲರಾದ ರಿಜ್ವಿ ಖಾನ್, ಅನೀಸ್ ಪಾಷಾ, ಅಲ್ಲಾವಲಿ ಮುಜಾಹಿದ್‌, ಮಹಮ್ಮದ್ ಅಲಿ ನೂರ್‌ ಹಿಂದ್ ಲ್ಯಾಬ್‌, ಪತ್ರಕರ್ತ ಸಿಕಂದರ್‌, ಮೆಹಬೂಬ್ ಬಾಷಾ, ಅಮ್ಜದ್ ಅಲಿ ಸೇರಿದಂತೆ ಅನೇಕರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

- - - -17ಕೆಡಿವಿಜಿ13:

ದಾವಣಗೆರೆಯಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಮಾತನಾಡಿದರು. -17ಕೆಡಿವಿಜಿ14:

ದಾವಣಗೆರೆಯಲ್ಲಿ ಬಕ್ರೀದ್ ಹಿನ್ನೆಲೆ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

-17ಕೆಡಿವಿಜಿ15, 16, 17:

ಬಕ್ರೀದ್ ಹಬ್ಬದ ದಾವಣಗೆರೆಯಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. -17ಕೆಡಿವಿಜಿ18, 19:

ದಾವಣಗೆರೆಯಲ್ಲಿ ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬ ಸಂಭ್ರಮದಲ್ಲಿರುವ ಮಕ್ಕಳು.