ಸಾರಾಂಶ
ದಾಬಸ್‌ಪೇಟೆ: ಐದು ಸಾವಿರ ಹಜರತ್ ವರ್ಷಗಳ ಇತಿಹಾಸವಿರುವ, ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ಸಾರವೇ ಬಕ್ರೀದ್ ಎಂದು ಜಾಮೀಯಾ ಮಸೀದಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಪ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಖಲೀಂ ಉಲ್ಲಾ ಹೇಳಿದರು.
ಸೋಂಪುರ ಹೋಬಳಿಯ ಲಕ್ಕೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಯ ಭಾಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯ, ತ್ಯಾಗ ಬಲಿದಾನದ ಆಚರಣೆಯಾಗಿ ಬಕ್ರೀದ್ ನಡೆಯುತ್ತಿದೆ, ನಮ್ಮ ಗ್ರಾಮದ ಸುಮಾರು 3500ಕ್ಕೂ ಅಧಿಕ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾವೈಕ್ಯತರ ಸಾರಿದ್ದೇವೆ. ಸಾಮೂಹಿಕ ಗೀತೆ ಹಾಡಿ, ಪರಸ್ಪರ ಶುಭಾಶಯ ಕೋರಿದ್ದೇವೆ, ಪ್ರವಾದಿ ಇಬ್ರಾಹಿಂ ಸ್ಮರಣೆ ಹಾಗೂ ಕಳೆದ ವರ್ಷ ದಾಬಸ್‌ಪೇಟೆ ಮತ್ತು ಲಕ್ಕೂರು ಭಾಗಕ್ಕೆ ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ಲಕ್ಕೂರಿನ ಮದರಸ ಹಾಗೂ ಗೋವಿಂದಪುರ, ಕೂತಘಟ್ಟ ಗ್ರಾಮದ ಅಭಿವೃದ್ಧಿ ಮುಂದಾಗುತ್ತೇವೆ ಎಂದು ತಿಳಿಸಿರುವುದು ಅತ್ಯಂತ ಹೆಚ್ಚು ಸ್ವಾಗತಾರ್ಹ ವಿಚಾರ ಎಂದು ಹೇಳಿದರು.
ವಿವಿಧಡೆ ಆಚರಣೆ: ಸೋಂಪುರ ಹೋಬಳಿಯ ಬಿಲ್ಲಿನಕೋಟೆ, ದಾಬಸ್‌ಪೇಟೆ, ಕೂತಘಟ್ಟ, ಹಾಲೇನಹಳ್ಳಿ ಗ್ರಾಮದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸಿದರು.ಈ ಸಂದರ್ಭದಲ್ಲಿ ಲಕ್ಕೂರಿನ ಜಾಮೀಯ ಮಸೀದಿ ಉಪಾಧ್ಯಕ್ಷರಾದ ಸೈಯದ್ ಸುಭಾನ್ ಸಾಬ್, ಅಶ್ವಕ್ ಅಹಮದ್, ಗ್ರಾ.ಪಂ.ಸದಸ್ಯರಾದ ಸೈಯದ್ ಮುಜಿಬ್ ಉಲ್ಲಾ, ಅಲ್ಲಾ ಭಕ್ಷ, ಸೈಯದ್ ಮಫ್ತಿಯಾರ್, ಜುನೈದ್ ಅಹಮದ್, ಜಮೀಲ್ ಅಹಮದ್, ಮನ್ಸೂರ್ ಅಹಮದ್, ಹಮ್ಜದ್ ಖಾನ್, ಮಹಮ್ಮದ್ ಗೌಸ್, ಅಶ್ವಕ್, ಇಸ್ಮಾಯಿಲ್ ಷರೀಫ್, ಅಮ್ಜರ್, ನವಾಬ್, ಶಫೀ, ಪ್ಯಾರಾಜಾನ್, ಅಲ್ಲಾ ಭಕ್ಷ್, ಇತರ ಮುಸ್ಲಿಂ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಇದ್ದರು.ಫೋಟೋ 3: ಲಕ್ಕೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಜಾಮೀಯಾ ಮಸೀದಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಪ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಖಲೀಂ ಉಲ್ಲಾ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
;Resize=(128,128))
;Resize=(128,128))
;Resize=(128,128))