ಕೆರೂರು ವಿರಕ್ತಮಠದ ವಿಜಯಮಹಾಂತ ದೇವರು ಸಮ್ಮುಖ ವಹಿಸಲಿದ್ದಾರೆ. ನಂತರ ಚಿಂಚಲಿ ಕ್ರಾಸ್‌ನಲ್ಲಿರುವ ಕಲ್ಮಠದ ಆವರಣದಲ್ಲಿ ಫಿರಂಗಿ ಬಸಮ್ಮನವರ ಗದ್ದುಗೆ ಲೋಕಾರ್ಪಣೆ ಹಾಗೂ ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ.

ಮುಳಗುಂದ: ಪಟ್ಟಣದ ಆರಾಧ್ಯ ದೈವ ಗವಿಮಠದ ಬಾಲಲೀಲಾ ಮಹಾಂತ ಶಿವಯೋಗಿಗಳ 167ನೇ ಸ್ಮರಣೋತ್ಸವದ ಅಂಗವಾಗಿ ಜ. 30, 31 ಮತ್ತು ಫೆ. 1ರಂದು ಜಾತ್ರಾ ಮಹೋತ್ಸವ ಅದ್ಧೂರಿ, ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪುರ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 30ರಂದು ಬೆಳಗ್ಗೆ 8.30ಕ್ಕೆ ಅಗಡಿ ಗುತ್ತಲ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಷಟಸ್ಥಲ್ ಧ್ವಜಾರೋಹಣ ನೆರವೇರಿಸುವರು. ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಷಟ್‌ಸ್ಥಲ ನುಡಿ ನುಡಿಯಲಿದ್ದಾರೆ.

ಕೆರೂರು ವಿರಕ್ತಮಠದ ವಿಜಯಮಹಾಂತ ದೇವರು ಸಮ್ಮುಖ ವಹಿಸಲಿದ್ದಾರೆ. ನಂತರ ಚಿಂಚಲಿ ಕ್ರಾಸ್‌ನಲ್ಲಿರುವ ಕಲ್ಮಠದ ಆವರಣದಲ್ಲಿ ಫಿರಂಗಿ ಬಸಮ್ಮನವರ ಗದ್ದುಗೆ ಲೋಕಾರ್ಪಣೆ ಹಾಗೂ ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ ಎಂದರು. ಅಂದು ಸಂಜೆ 7ಕ್ಕೆ ನಡೆಯುವ ಅನುಭಾವ ಗೋಷ್ಠಿ- 1ರ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಡಾ. ಗುರುಸಿದ್ದ ರಾಜಯೋಗಿಂದ್ರ ಸ್ವಾಮಿಗಳು, ಸಮ್ಮುಖವನ್ನು ಡಾ. ಮಹಾಂತ ಸ್ವಾಮೀಜಿ ಹಾಗೂ ನಾಗಭೂಷಣ ಸ್ವಾಮಿಗಳು ವಹಿಸುವರು.

ಉದ್ಘಾಟನೆಯನ್ನು ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ ನೆರವೇರಿಸುವರು. ಅಧ್ಯಕ್ಷತೆಯನ್ನು ಅರ್ಬನ್ ಬ್ಯಾಂಕ್ ಚೇರಮನ್ ಎಸ್.ಎಂ. ನೀಲಗುಂದ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಆಗಮಿಸುವರು.

ಧಾರವಾಡದ ಉಪನ್ಯಾಸಕ ಡಿ.ಎಂ. ಹಿರೇಮಠ ಅವರಿಂದ ಕೈವಲ್ಯದರ್ಪಣ ಗ್ರಂಥದ ಬಗ್ಗೆ ಉಪನ್ಯಾಸ ನೀಡುವರು. ನಿಮಿಷಾಂಬಾ ಜ್ಯೋತಿಶ್ರೀ ನಾಟ್ಯ ಅಕಾಡೆಮಿ ಇವರಿಂದ ವಚನ ನೃತ್ಯ, ಶ್ವೇತಾ ದೋಟಿಕಲ್ಲ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದರು. ಜ. 31ರಂದು ಮಧ್ಯಾಹ್ನ ಮಹಾದಾಸೋಹ, ಸಂಜೆ 5ಕ್ಕೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮಹಾ ರಥೋತ್ಸವ ನಡೆಯಲಿದೆ. ಸಂಜೆ 7ಕ್ಕೆ ಅನುಭಾವ ಗೋಷ್ಠಿ- 2ರ ಸಾನ್ನಿಧ್ಯವನ್ನು ಮಲ್ಲಿಕಾಜುನ ಮುರುಘರಾಜೇಂದ್ರ ಸ್ವಾಮಿಗಳು, ಸಮ್ಮುಖವನ್ನು ಸಿದ್ದಲಿಂಗ ಸ್ವಾಮಿಗಳು ಹಾಗೂ ಗುರುಲಿಂಗ ಸ್ವಾಮಿಗಳು ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಹಿರಿಯರಾದ ಗೌರಮ್ಮ ಬಡ್ನಿ, ಮಹಾದೇವಪ್ಪ ಬಟ್ಟೂರ ಆಗಮಿಸುವರು. ಈ ವೇಳೆ ಏಕಲವ್ಯ ಪ್ರಶಸ್ತಿ ವಿಜೇತ ಕುಸ್ತಿ ಪಟು ಐಶ್ವರ್ಯ ಕರಿಗಾರ ಅವರಿಗೆ ಸನ್ಮಾನವಿದೆ. ಫೆ. 1ರಂದು ಸಂಜೆ 5ಕ್ಕೆ ಮಲ್ಲಿಕಾರ್ಜನ ಸ್ವಾಮಿಗಳಿಂದ ಕಡುಬಿನ ಕಾಳಗ ನೆರವೇರಲಿದೆ. ಸಂಜೆ 7ಕ್ಕೆ ಅನುಭಾವ ಗೋಷ್ಠಿ- 3ರಲ್ಲಿ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪಾಲ್ಗೊಳ್ಳುವರು ಎಂದರು.

ಹಿರಿಯರಾದ ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಅಶೋಕ ಸೊನಗೋಜಿ, ಡಾ. ಎಸ್‌.ಸಿ. ಚವಡಿ, ಬಸವರಾಜ ಬಡ್ನಿ, ಷಣ್ಮುಖಪ್ಪ ಬಡ್ನಿ, ಇಮಾಮಸಾಬ ಶೇಖ, ಹೊನ್ನಪ್ಪ ನೀಲಗುಂದ, ಜಾತ್ರಾ ಸಮಿತಿ ಅಧ್ಯಕ್ಷ ಗಂಗಪ್ಪ ಸುಂಕಾಪರ ಇತರರು ಇದ್ದರು.