ಬಲಮುರಿ ಗಣಪತಿ ದೇವಾಲಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

| Published : Oct 25 2025, 01:00 AM IST

ಬಲಮುರಿ ಗಣಪತಿ ದೇವಾಲಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಲಕ್ಷ್ಮೀ ಬಡಾವಣೆಯಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ನಿರ್ವಿಘ್ನ ಬಲಮುರಿ ಗಣಪತಿಯನ್ನು ಲೋಕಾರ್ಪಣೆಗೊಳಿಸಲಾಗುವುದು. ಬಡಾವಣೆಯ ನಿವಾಸಿಗಳಿಗೆ ಸುತ್ತಮುತ್ತ ದೇವಸ್ಥಾನ ಇಲ್ಲದೆ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಮನಗಂಡು ಬಡಾವಣೆಯ ಪ್ರಮುಖರು ದೇವಸ್ಥಾನ ನಿರ್ಮಾಣ ಮಾಡಲು ಮುಂದಾದರು. ಪಟ್ಟಣದಲ್ಲೇ ಪ್ರಥಮ ಬಾರಿಗೆ ನಿರ್ವಿಘ್ನ ಗಣಪತಿ ಸ್ಥಾಪಿಸಲಾಗುತ್ತಿದ್ದು, ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಗ್ರಾಮದೇವತೆ ವಳಗೇರಮ್ಮ ದೇವಿಯ ವೈಭವಪೂರ್ಣ ಉತ್ಸವದೊಂದಿಗೆ ಶ್ರೀಲಕ್ಷ್ಮೀ ಬಡಾವಣೆಗೆ ಆಗಮಿಸಲಿದ್ದು ಮಂಗಳವಾದ್ಯ, ಚಂಡಿವಾದ್ಯ, ಕೋಲಾಟ ಮೆರವಣಿಗೆಗೆ ಮೆರುಗು ನೀಡಲಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶ್ರೀ ನಿರ್ವಿಘ್ನ ಬಲಮುರಿ ಗಣಪತಿ ದೇವಾಲಯ ಹಾಗೂ ನವಗ್ರಹ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವವು ಅ. ೨೫ ಮತ್ತು ಅ.೨೬ರಂದು ಜರುಗಲಿದೆ ಎಂದು ಹಿರಿಯ ವಕೀಲ ಡಿ. ಎ. ವಾಸು ತಿಳಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಶ್ರೀಲಕ್ಷ್ಮೀ ಬಡಾವಣೆಯಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ನಿರ್ವಿಘ್ನ ಬಲಮುರಿ ಗಣಪತಿಯನ್ನು ಲೋಕಾರ್ಪಣೆಗೊಳಿಸಲಾಗುವುದು. ಬಡಾವಣೆಯ ನಿವಾಸಿಗಳಿಗೆ ಸುತ್ತಮುತ್ತ ದೇವಸ್ಥಾನ ಇಲ್ಲದೆ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಮನಗಂಡು ಬಡಾವಣೆಯ ಪ್ರಮುಖರು ದೇವಸ್ಥಾನ ನಿರ್ಮಾಣ ಮಾಡಲು ಮುಂದಾದರು. ಪಟ್ಟಣದಲ್ಲೇ ಪ್ರಥಮ ಬಾರಿಗೆ ನಿರ್ವಿಘ್ನ ಗಣಪತಿ ಸ್ಥಾಪಿಸಲಾಗುತ್ತಿದ್ದು, ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಗ್ರಾಮದೇವತೆ ವಳಗೇರಮ್ಮ ದೇವಿಯ ವೈಭವಪೂರ್ಣ ಉತ್ಸವದೊಂದಿಗೆ ಶ್ರೀಲಕ್ಷ್ಮೀ ಬಡಾವಣೆಗೆ ಆಗಮಿಸಲಿದ್ದು ಮಂಗಳವಾದ್ಯ, ಚಂಡಿವಾದ್ಯ, ಕೋಲಾಟ ಮೆರವಣಿಗೆಗೆ ಮೆರುಗು ನೀಡಲಿದೆ.ಶಿವಾರ ಉಮೇಶ್ ತಂಡದಿಂದ ಜನಪದ ಝೇಂಕಾರ ಕಾರ್ಯಕ್ರಮ ಏರ್ಪಡಿಸಿದ್ದು ಬರುವ ಭಕ್ತಾದಿಗಳಿಗೆ ಎರಡು ದಿನಗಳ ಕಾಲ ಅನ್ನಸಂತರ್ಪಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ, ಗುರುಮೂರ್ತಿ ಗುರೂಜಿ, ಸಂಸದ ಶ್ರೇಯಸ್‌ ಎಂ.ಪಟೇಲ್, ಡಾ. ಸೂರಜ್‌ ರೇವಣ್ಣ, ಶಾಸಕ ಸಿ. ಎನ್. ಬಾಲಕೃಷ್ಣ, ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ಮತ್ತಿತರೆ ಗಣ್ಯರು ಆಗಮಿಸಲಿದ್ದಾರೆ ಎಂದರು. ಈ ವೇಳೆ ಮೂಡನಹಳ್ಳಿ ನಾಗೇಶ್ ಮತ್ತು ರೋಟರಿ ಕ್ಲಬ್‌ನ ಅಧ್ಯಕ್ಷ ಹಾಗೂ ವಕೀಲ ಗಿರೀಶ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ದೇವಿ ಬಡಾವಣೆಯ ಮರಿಗೌಡ ರಾಯಸಮುದ್ರ, ತೋಟಿರಂಗಪ್ಪ, ವಾಸುಕಾಂತರಾಜಪುರ, ರಾಜು ಪೊಲೀಸ್, ವಿಶ್ವ, ಕೇಶವ, ಗುರುನಂದನ್, ನಾಗಣ್ಣಪಾರೆಸ್ಟ್, ಮಹೇಶ್, ಪ್ರಸಾದ್ ಮತ್ತಿತರಿದ್ದರು.