ಸಾರಾಂಶ
ಏ.15ರಂದು ಸಂಜೆ 7.15ರಿಂದ ಬಳಂಜ ಶ್ರೀ ಪಂಚಲಿಂಗೇಶ್ವರ ಹವ್ಯಾಸಿ ಯಕ್ಷಗಾನ ತರಬೇತಿ ಕೇಂದ್ರ ಇವರಿಂದ ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇತಿಹಾಸ ಪ್ರಸಿದ್ಧ ಬಳಂಜ ಶ್ರೀ ಪಂಚಲಿಂಗೇಶ್ವರ- ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ನಡ್ಡಂತಾಡಿ ವೇದಮೂರ್ತಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಏ.9ರಿಂದ 16ರ ತನಕ ನಡೆಯಲಿದೆ ಎಂದು ಅನುವಂಶೀಯ ಆಡಳಿತ ಮೊಕ್ತೇಸರ ಬಿ. ಶೀತಲ್ ಪಡಿವಾಲ್ ತಿಳಿಸಿದ್ದಾರೆ.ಏ.9ರಂದು ಸಂಜೆ 6.30ಕ್ಕೆ ಬಳಂಜ ಶಾಲಾ ಬಳಿಯಿಂದ ದೇವಳದ ವರೆಗೆ ಮೈಸೂರಿನ ಶ್ರೀದೇವಿ ಮತ್ತು ಶ್ರೀ ಬಾಲಕೃಷ್ಣ ಭಟ್ ಹಾಗೂ ಮಕ್ಕಳು ಇವರು ನೂತನವಾಗಿ ನಿರ್ಮಿಸಿದ ಪಲ್ಲಕಿಯ ಭವ್ಯ ಮೆರವಣಿಗೆ, ನಂತರ ಶ್ರೀ ದೇವರಿಗೆ ಸಮರ್ಪಣೆ ಕಾರ್ಯ ನಡೆಯಲಿದೆ. ದೇವರ ಉತ್ಸವಾಧಿ ಕಾರ್ಯಕ್ರಮಗಳು, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ಭಜನೆ, ಅನ್ನಸಂತರ್ಪಣೆ, ದರ್ಶನ ಬಲಿ ಉತ್ಸವ, ದೈವ ದೇವರ ಭೇಟಿ, ಕೊಡಮಣಿತ್ತಾಯ ದೈವದ ನೇಮೋತ್ಸವ, ಮಹಾಪೂಜೆ ನಡೆಯಲಿದೆ.
ಏ.15ರಂದು ಸಂಜೆ 7.15ರಿಂದ ಬಳಂಜ ಶ್ರೀ ಪಂಚಲಿಂಗೇಶ್ವರ ಹವ್ಯಾಸಿ ಯಕ್ಷಗಾನ ತರಬೇತಿ ಕೇಂದ್ರ ಇವರಿಂದ ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ. 8.15ರಿಂದ ಅರೆಹೊಳೆ ಪ್ರತಿಷ್ಠಾನ ಮಂಗಳೂರು- ಕುಂದಾಪುರ ತಂಡದವರಿಂದ ಸಾಂಸ್ಕೃತಿಕ ವೈಭವ. 9.30ರಿಂದ ‘ಮೈತಿದಿ’ ತುಳುನಾಟಕ ಪ್ರದರ್ಶನಗೊಳ್ಳಲಿದೆ.