ಬನ್ನಂಗಾಡಿ ಗ್ರಾಪಂ ಅಧ್ಯಕ್ಷರಾಗಿ ಬಲರಾಮಶೆಟ್ಟಿ ಅವಿರೋಧ ಆಯ್ಕೆ

| Published : Dec 12 2024, 12:32 AM IST

ಸಾರಾಂಶ

ಹಿಂದಿನ ಅಧ್ಯಕ್ಷ ಪ್ರಭಾಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಬಲರಾಮಶೆಟ್ಟಿ ಹೊರತುಪಡಿಸಿ ಉಳಿದ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಾಪಂ ಇಓ ಲೋಕೇಶ್ ಮೂರ್ತಿ ಬಲರಾಮಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಂಗಾಡಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಲರಾಮಶೆಟ್ಟಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಪ್ರಭಾಕರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಬಲರಾಮಶೆಟ್ಟಿ ಹೊರತುಪಡಿಸಿ ಉಳಿದ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ತಾಪಂ ಇಓ ಲೋಕೇಶ್ ಮೂರ್ತಿ ಬಲರಾಮಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷ ಬಲರಾಮಶೆಟ್ಟಿ ಅವರನ್ನು ಎಲ್ಲಾ ಸದಸ್ಯರು ಮುಖಂಡರು ಅಭಿನಂಧಿಸಿದರು. ಈ ವೇಳೆ ಅಧ್ಯಕ್ಷ ಬಲರಾಮಶೆಟ್ಟಿ ಮಾತನಾಡಿ, ಮಾಜಿ ಸಚಿವರು, ನಾಯಕರು ಆದ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಎಲ್ಲಾ ಸದಸ್ಯರು ಬೆಂಬಲದಿಂದ ಬನ್ನಂಗಾಡಿ ಗ್ರಾಪಂನ ನೂತನ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಮಾರ್ಗದರ್ಶನ, ಸಹಕಾರದಿಂದ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು ಎಂದರು.

ಈ ವೇಳೆ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಪ್ರಭಾಕರ್, ಯೋಗೇಶ್, ಜಯಲಕ್ಷ್ಮಮ್ಮಮರಿಸ್ವಾಮೀಗೌಡ, ಸದಸ್ಯರಾದ ಮಂಜಯ್ಯ, ಸವಿತನಾಗಣ್ಣ, ರಾಮಶೆಟ್ಟಿ, ಶೃತಿ, ಪದ್ಮಮ್ಮ, ತಾಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ತಾಪಂ ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಎಸ್.ಶ್ರೀನಿವಾಸ್, ಮಾಜಿ ಸದಸ್ಯ ಪ್ರಕಾಶ್, ಮುಖಂಡರಾದ ಕರೀಗೌಡ, ಪಟೇಲ್ ನಾಗಣ್ಣ, ನಿವೃತ್ತ ಶಿಕ್ಷಕ ಶಿವೇಗೌಡ, ಬಿಂಡಹಳ್ಳಿ ನಾಗಣ್ಣ, ಲಾರಿ ನಾಗೇಶ್, ಬಿ.ಕೆ.ರಾಮೇಗೌಡ, ಲೋಕೇಶ್, ವೈನ್ ಸ್ಟೋರ್ ಪ್ರಸನ, ಅಂಡಗಿ ಅಣ್ಣಯ್ಯ, ಮೆಡಿಕಲ್ ವಿಶ್ವ, ಸುಧಾಮಣಿಬಲರಾಮಶೆಟ್ಟಿ, ಶಿವಕುಮಾರ್, ಪಿಡಿಒ ಲಕ್ಷ್ಮೇಗೌಡ ಸೇರಿದಂತೆ ಹಲವರು ಹಾಜರಿದ್ದರು.