ಹಿಂದುಗಳ ಶಕ್ತಿಯಾಗಿರುವ ಬಲಿಜ ಸಮಾಜ: ಶಾಸಕ ಚನ್ನಬಸಪ್ಪ

| Published : Feb 05 2024, 01:49 AM IST

ಹಿಂದುಗಳ ಶಕ್ತಿಯಾಗಿರುವ ಬಲಿಜ ಸಮಾಜ: ಶಾಸಕ ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಲಿಜ ಸಮಾಜ ಹಿಂದು ಸಮಾಜಕ್ಕೆ ಶಕ್ತಿ ಕೊಟ್ಟಿರುವ ಸಮಾಜ. ನಾವು ಸಣ್ಣವರು ಎಂಬ ಭಾವನೆ ಬಿಟ್ಟು ನಮ್ಮ ದೇಶ, ಕ್ಷೇತ್ರ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಕಾರಣವಾಗುತ್ತವೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ ಕೊಡುಗೆಯಿಂದ ಅತ್ಯುತ್ತಮ ಭವನ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಸಮಾಜಗಳ ಏಳಿಗೆಗೆ ಮುಂದಾಗಬೇಕು ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬಲಿಜ ಸಮಾಜ ಹಿಂದು ಸಮಾಜಕ್ಕೆ ಶಕ್ತಿ ಕೊಟ್ಟಿರುವ ಸಮಾಜ. ನಾವು ಸಣ್ಣವರು ಎಂಬ ಭಾವನೆ ಬಿಟ್ಟು ನಮ್ಮ ದೇಶ, ಕ್ಷೇತ್ರ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಭಾನುವಾರ ಜಿಲ್ಲಾ ಬಲಿಜ ಸೇವಾ ಸಂಘದಿಂದ ನಿರ್ಮಿಸಿರುವ ಶ್ರೀ ಯೋಗಿ ನಾರೇಯಣ ಬಲಿಜ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿ, ಯಾವುದೇ ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಕಾರಣವಾಗುತ್ತವೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ ಕೊಡುಗೆಯಿಂದ ಅತ್ಯುತ್ತಮ ಭವನ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಸಮಾಜಗಳ ಏಳಿಗೆಗೆ ಮುಂದಾಗಬೇಕು ಎಂದರು.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಬಲಿಜ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಮಾಜವನ್ನು 2ಎ ವರ್ಗಕ್ಕೆ ಸೇರಿಸುವ ಮೂಲಕ, ಹಾಗೂ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ. ಭವನ ನಿರ್ಮಾಣಕ್ಕೆ ಮಂಜೂರಾಗಿರುವ ₹75 ಲಕ್ಷ ಅನುದಾನ ಬಿಡುಗಡೆಯಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸಿ, ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯಡಿಯೂರಪ್ಪನವರು ಬಲಿಜ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ₹1 ಕೋಟಿ ಹಾಗೂ ಸಮುದಾಯ ಭವನಕ್ಕೆ ₹1 ಕೋಟಿ ಅನುದಾನ ನೀಡಿದ್ದಾರೆ. ಶಿವಮೊಗ್ಗ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.

ಬಲಿಜ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ತು ಸದಸ್ಯ ಎಂ.ಆರ್. ಸೀತಾರಾಮ್ ಮಾತನಾಡಿ, ಹಿಂದುಳಿದ ಸಮುದಾಯಗಳ ಏಳಿಗೆ ಆ ಸಮುದಾಯದ ಮಕ್ಕಳ ಉತ್ತಮ ವಿದ್ಯಾರ್ಜನೆಯಿಂದ ಮಾತ್ರ ಸಾಧ್ಯ ಎಂದರು.

ಜಿಲ್ಲಾಧ್ಯಕ್ಷ ಜಿ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಶಿವಕುಮಾರ್, ರಾಜ್ಯ ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಸುಂದರ್ ಮಾತನಾಡಿದರು. ಉಪಾಧ್ಯಕ್ಷರಾದ ವಿ ಕೃಷ್ಣಮೂರ್ತಿ, ಎಸ್.ಎಂ.ವೆಂಕಟೇಶ್, ಆರ್.ಕೆ. ದೇವದಾಸ್, ನಿರ್ದೇಶಕರಾದ ಡಿ.ರಮಣಯ್ಯ, ಎನ್.ವೆಂಕಟೇಶ್ ನಾಯ್ಡು, ಆರ್.ರಂಜಿತ್, ಎನ್.ರಾಮಾಂಜನೇಯ, ಜಯಕರ ರಾವ್, ರಘುರಾಮ್ ಮತ್ತಿತರರು ಇದ್ದರು.

- - - ಬಾಕ್ಸ್ ಬಲಿಜ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ನೀಡಿದ್ದೇನೆ. ₹25 ಲಕ್ಷ ಬಂದಿದೆ. ₹75 ಲಕ್ಷ ಬರಬೇಕಿದೆ. ಅದನ್ನು ತರುವ ನಿಟ್ಟಿನಲ್ಲಿ ಯತ್ನ ಮಾಡಬೇಕಿದೆ. ಬಲಿಜ ಸಮಾಜ ಎಚ್ಚರಗೊಳ್ಳಬೇಕಿದೆ. ಉತ್ತಮ ಕೆಲಸ ಮಾಡುತ್ತಿರುವ ಸಮಾಜ ಇನ್ನಷ್ಟು ಸಂಘಟನೆ ಆಗಬೇಕಿದೆ. ಭವಿಷ್ಯದಲ್ಲಿ ಕೇಂದ್ರದ ಮಂತ್ರಿ ಮಾಡುವ ನಿಟ್ಟಿನಲ್ಲಿ ಬಿ.ವೈ. ರಾಘವೇಂದ್ರ ಅವರಿಗೆ ಮತ ನೀಡಬೇಕು

- ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ

- - - -4ಎಸ್‌ಎಂಜಿಕೆಪಿ03:

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಭಾನುವಾರ ಜಿಲ್ಲಾ ಬಲಿಜ ಸೇವಾ ಸಂಘದಿಂದ ನಿರ್ಮಿಸಿರುವ ಶ್ರೀ ಯೋಗಿ ನಾರೇಯಣ ಬಲಿಜ ಸಮುದಾಯ ಭವನವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.