ಸಾರಾಂಶ
ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಲಯ ಪದವಿ ಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಅತಿಥೇಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ.ಬಾಲಕರ ತಂಡದಲ್ಲಿ ಅಕ್ಷಯ್ ಬಿಲ್ಲವ, ಪ್ರಜ್ವಲ್ ಪೈ, ರಿತಿಕ್ ಆರ್. ಪೂಜಾರಿ, ಸನ್ಮಿತ್, ನಿಹಾಲ್ ಎಸ್. ಪೂಜಾರಿ, ಸಂಕೇತ್, ಕೀರ್ತನ್ ಡಿ. ಪೂಜಾರಿ, ಪ್ರಥಮ್ ಯು. ಮೇಸ್ತ, ರಜತ್ ಮತ್ತು ಆದಿತ್ಯ ಶೆಟ್ಟಿ ಹಾಗೂ ಬಾಲಕಿಯರ ತಂಡದಲ್ಲಿ ಕ್ಷಮಾ ಆಚಾರ್ಯ, ಸನ್ನಿಧಿ ಕರ್ಣಿಕ್, ಸಹನಾ ಖಾರ್ವಿ, ಸುನಿಧಿ ಕರ್ಣಿಕ್, ಖುಷಿ, ಶ್ರೇಷ್ಠ ಮೇಸ್ತ, ಮಾನ್ಯ ಖಾರ್ವಿ, ಶ್ರೀನಿಧಿ ವಿ. ಖಾರ್ವಿ, ಸಾಪೇಕ್ಷಾ ಖಾರ್ವಿ ಮತ್ತು ಭೂಮಿಕಾ ಖಾರ್ವಿ ಪ್ರತಿನಿಧಿಸಿದ್ದರು.ಕ್ಷಮಾ ಆರ್. ಆಚಾರ್ಯ, ಸುನಿಧಿ ಕರ್ಣಿಕ್, ಸಹನಾ ಖಾರ್ವಿ, ಅಕ್ಷಯ್ ಬಿಲ್ಲವ, ಪ್ರಜ್ವಲ್ ಪೈ ಮತ್ತು ರಿತಿಕ್ ಆರ್. ಪೂಜಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಉಪನ್ಯಾಸಕ ದೀಕ್ಷಿತ್ ಮೇಸ್ತ ಮಾರ್ಗದರ್ಶನ ನೀಡಿದ್ದರು. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದದವರು ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿದ್ದಾರೆ.