ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಭಾಗ್ಯವತಿ, ಗ್ರಾಮ ಪಂಚಾಯಿತಿ ಸದಸ್ಯರು, ಪೋಷಕರು, ದಾನಿಗಳ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಅಂಗನವಾಡಿ ಕೇಂದ್ರ ಉತ್ತಮ ಮಟ್ಟದಲ್ಲಿ ನಡೆಯಲು ಕಾರಣಕರ್ತರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಹೇಳಿದರು.ಇಲ್ಲಿನ ಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಲ್ಲಮಾವಟ್ಟಿ ವೃತ್ತದ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಗ್ರಾಜುಯೇಷನ್ ಡೇ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರೊ. ಕಲ್ಯಾಣ ಪೋಣಚ್ಚ ಕಾರ್ಯಕ್ರಮ ಉದ್ಘಾಟಿಸಿದರು.ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯುವರಾಜ್ ಮೇಪಡಂಡ, ಸವಿತಾ ಕೀರ್ತನ್, ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೀತಾ ಲಕ್ಷ್ಮೀ, ದಂತ ವೈದ್ಯೆ ನೂರ್ ಫಾತಿಮಾ, ಬಾಲ ವಿಕಾಸ ಸಮಿತಿಯವರು, ದಾನಿಗಳು, ಪೋಷಕ ವೃಂದ ಹಾಜರಿದ್ದರು.ಈ ಸಂದರ್ಭ ಮಕ್ಕಳಿಗೆ ವಿವಿಧ ಆಟೋ ಸ್ಪರ್ಧೆ, ಬರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.ಪುನಃ ಚೇತನ ಸಂಸ್ಥೆಯ ಅಧ್ಯಕ್ಷ ಬಾಲೆಯಡ ದಿವ್ಯ ಮಂದಪ್ಪ, ಜಾನಪದ ಕಲೆಯಲ್ಲಿ ಪ್ರವೀಣತೆ ಪಡೆದ ಬೊಪ್ಪಂಡ ಬೊಳ್ಳಮ್ಮ ನಾಣ್ಣಯ್ಯ, ಬೊಪ್ಪಂಡ ಯಶೋದಾ, ಶೌರ್ಯ ತಂಡವನ್ನು ಸನ್ಮಾನಿಸಲಾಯಿತು. ಬಳಿಕ ಜರುಗಿದ ಮಕ್ಕಳ ಹಾಗೂ ಪೋಷಕರ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು. ಸ್ಪರ್ಧೆಗಳಲ್ಲಿ ವಿಜೇತಾದ ಮಕ್ಕಳಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
17-ಎನ್ ಪಿ ಕೆ-2.ಬಲ್ಲಮಾವಟ್ಟಿ ವೃತ್ತದ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಗ್ರಾಜುಯೇಷನ್ ಡೇ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಕಲೆಯಲ್ಲಿ ಪ್ರವೀಣತೆ ಪಡೆದ, ಬೊಪ್ಪಂಡ ಬೊಳ್ಳಮ್ಮ ನಾಣ್ಣಯ್ಯ, ಉತ್ತಮ ಕೆಲಸವನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 17-ಎನ್ ಪಿ ಕೆ-3.ಬಲ್ಲಮಾವಟ್ಟಿ ವೃತ್ತದ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಗ್ರಾಜುಯೇಷನ್ ಡೇ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುನಃ ಚೇತನ ಸಂಸ್ಥೆಯ ಅಧ್ಯಕ್ಷ ಬಾಲೆಯಡ ದಿವ್ಯ ಮಂದಪ್ಪ, ಹಾಗೂ ಶೌರ್ಯ ತಂಡ ಸದಸ್ಯರನ್ನು ಸನ್ಮಾನಿಸಲಾಯಿತು.17-ಎನ್ ಪಿ ಕೆ-4.ಮಕ್ಕಳ ಹಾಗೂ ಪೋಷಕರ ನೃತ್ಯ , ಸಾಂಸ್ಕೃತಿಕ ಕಾರ್ಯಕ್ರಮ.