ಎಲ್ಲ ಚಾರಣ ಪಥಗಳಿಗೆ ಜ. 14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕಾರ್ಕಳ: ಬೆಂಕಿ ಕಾಲ (ಫೈರ್ ಸೀಸನ್) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾರಣಿಗರು ಹಾಗೂ ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿನ ಎಲ್ಲ ಚಾರಣ ಪಥಗಳಿಗೆ ಜ. 14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ಈ ಆದೇಶದಂತೆ ವನ್ಯಜೀವಿ ಅಭಯಾರಣ್ಯಗಳ ಅರಣ್ಯ ಪ್ರದೇಶಗಳಲ್ಲಿ ಇರುವ ಕುದುರೆಮುಖ, ಕುರಿಂಜಾಲು, ವಾಲಿಕುಂಜ (ಎಸ್.ಕೆ. ಬಾರ್ಡರ್), ಗಂಗಾಡಿಕಲ್, ವಾಲಿಕುಂಜ (ಕಾರ್ಕಳ ಚಾರಣ ಪಥ), ನರಸಿಂಹಪರ್ವತ (ಮಲ್ಲಂದೂರು), ಕೊಡಚಾದ್ರಿ (ಮಳ್ಳೂರು), ಕೊಡಚಾದ್ರಿ (ಹಿಡ್ಲುಮನೆ ಮಾರ್ಗ), ಬಂಡಾಜೆ–ವೊಲಾಂಬ್ರ ಹಾಗೂ ನೇತ್ರಾವತಿ ಬೆಟ್ಟಗಳು ಸೇರಿದಂತೆ ಎಲ್ಲಾ ಚಾರಣ ಪಥಗಳಿಗೆ ಚಾರಣಿಗರು, ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
