ಕಡೂರುಬನದ ಹುಣ್ಣಿಮೆ ಅಂಗವಾಗಿ ಕಡೂರು ಪಟ್ಟಣದಲ್ಲಿ ನೆಲೆಸಿರುವ ಶ್ರೀ ಬನಶಂಕರಿದೇವಿಗೆ ಶನಿವಾರ ದೇವಾಂಗ ಸಮಾಜ ಬಾಂಧವರಿಂದ ಹೋಮ, ಅಭಿಷೇಕ ವಿಶೇಷ ಪೂಜೆಗಳು ನೆರವೇರಿಸಲಾಯಿತು.

ದೇವಾಂಗ ಸಮಾಜ ಬಾಂಧವರಿಂದ ಆಯೋಜಿಸಿದ್ದ ಪೂಜಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಬನದ ಹುಣ್ಣಿಮೆ ಅಂಗವಾಗಿ ಕಡೂರು ಪಟ್ಟಣದಲ್ಲಿ ನೆಲೆಸಿರುವ ಶ್ರೀ ಬನಶಂಕರಿದೇವಿಗೆ ಶನಿವಾರ ದೇವಾಂಗ ಸಮಾಜ ಬಾಂಧವರಿಂದ ಹೋಮ, ಅಭಿಷೇಕ ವಿಶೇಷ ಪೂಜೆಗಳು ನೆರವೇರಿಸಲಾಯಿತು. ಶುಕ್ರವಾರ ನೂರಾರು ಭಕ್ತರು ಶ್ರೀ ಬನಶಂಕರಿ ದೇವಿಯನ್ನು ಕಲ್ಲತ್ತಿಗಿರಿಗೆ ಕರೆದೊಯ್ದು ಗಂಗಾಪೂಜೆ ಮಾಡಿ ಮರಳಿ ಬಂದು ಹುಣ್ಣಿಮೆ ದಿನವಾದ ಶನಿವಾರ ಬೆಳಗ್ಗೆ ವಿಶೇಷ ಅಲಂಕಾರದೊಂದಿಗೆ ಹೋಮ, ಹವನ ಮಾಡಿ, ಲಲಿತ ಹೋಮ ನಡೆಸಿದರು. ದೇವಾಂಗ ಸಮಾಜ ಚಾರಿಟಬಲ್ ಟ್ರಸ್ಸಿನ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬನದ ಹುಣ್ಣಿಮೆ 32 ವಾರ್ಷಿ ಕೋತ್ಸವವನ್ನು ಭಕ್ತರು ಹಾಗೂ ಸಮಾಜ ಬಾಂಧವರು ಸೇರಿ ಅದ್ಧೂರಿಯಾಗಿ ನೆರವೇರಿಸಲಾಗುತ್ತಿದೆ. ದೇವಾಲಯದ ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು ಭಕ್ತಾಧಿಗಳು ಧನ ಸಹಾಯ ಮಾಡುವ ಮೂಲಕ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು. ಪೂರ್ಣಾಹುತಿ ಬಳಿಕ ದೇವಿ ನಂದಿ ಧ್ವಜದ ಹರಾಜು ಪ್ರಕ್ರಿಯೆಯಲ್ಲಿ ಸಮಾಜದ ಹಿರಿಯ ಕೃಷ್ಣಮೂರ್ತಿ ₹1 ಲಕ್ಷಕ್ಕೆ ಬಾವುಟ ತಮ್ಮದಾಗಿಸಿಕೊಂಡರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಶ್ರೀ ದೇವಾಂಗ ಸಮಾಜ ಚಾರಿಟಬಲ್ ಟ್ರಸ್ಟಿನ ಗೌರವಾಧ್ಯಕ್ಷ ಯೋಗೀಶ್ವರ್ ಜೆ,ದೇವಾಲಯ ಕಟ್ಟಡ ಸಮಿತಿ ಅಧ್ಯಕ್ಷ ಎಚ್.ಎಲ್.ರಂಗನಾಥ್(ಬೆಂಕಿ), ಬನದ ಹುಣ್ಣಿಮೆ ಸಮಿತಿ ಅಧ್ಯಕ್ಷ ಬಿ.ಆರ್.ವಿನೋದ್ ಕುಮಾರ್, ಉಪಾಧ್ಯಕ್ಷೆ. ಕೆ. ಮಂಜುನಾಥ್, ಕಾರ್ಯದರ್ಶಿ .ಜಿ.ಮಲ್ಲಿಕಾರ್ಜುನ್, ಕೆ. ನಾಗರಾಜು,ಕೆ.ಎಂ.ನಾಗರಾಜು,ರಾಮಣ್ಣ, ವನರಾಜು, ಟಿ.ಆರ್. ಜುನಾಥ್,ತಮ್ಮಯ್ಯ,ಚಂದ್ರಶೇಖರ್,ಕೃಷ್ಣಮೂರ್ತಿ,ಕೋಳಿ ಕುಮಾರ್.ಕೆ.,ಅಕ್ಷಯ್,ದರ್ಶನ್,ರಾಜು ಮತ್ತು ಮನೋಜ್, ವಿಜಯಲಕ್ಷ್ಮೀ, ಚೈತ್ರಶ್ರೀ, ಶೋಭಾ ಚಂದ್ರಶೇಖರ್, ಮಾನಸ, ಚಂದನಾ ಹರೀಶ್ ಸೇರಿದಂತೆ ಮತ್ತಿತರರು ಇದ್ದರು.3ಕೆೆೆಕೆಡಿಯು1.

ಬನದ ಹುಣ್ಣಿಮೆ ಪ್ರಯುಕ್ತ ಕಡೂರು ಪಟ್ಟಣದ ಶ್ರೀ ಬನಶಂಕರಿದೇವಿಗೆ ನಡೆದ ವಿಶೇಷ ಹೋಮದ ವೇಳೆ ಸಮಿತಿಯವರು ಮತ್ತು ಭಕ್ತರು ಹಾಜರಿದ್ದರು.