ಸಾರಾಂಶ
ಇದರಿಂದ ನಂಜುಂಡಯ್ಯ ಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ ಕಡಬೂರು ಗ್ರಾಮದ ನಂಜುಂಡಯ್ಯ ಎಂಬವರ ಜಮೀನಿಗೆ ಕಾಡಾನೆಗಳು ದಾಳಿ ನಡೆಸಿ ಏಲಕ್ಕಿ ಬಾಳೆ ಫಸಲನ್ನು ನಾಶ ಮಾಡಿವೆ. ಇವರು ಎರಡು ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆಹಣ್ಣು ಬೆಳೆದಿದ್ದರು. ಎರಡು ಕಾಡಾನೆಗಳು ದಾಳಿ ನಡೆಸಿ ಫಸಲನ್ನು ತಿಂದು ಹಾಕಿದೆ ಸಾಕಷ್ಟು ಪ್ರಮಾಣದ ಬೆಳೆಗಳನ್ನು ತುಳಿದು ನಾಶ ಮಾಡಿದೆ ಇದರಿಂದ ರೈತ ನಂಜುಂಡಯ್ಯನಿಗೆ ಅಪಾರ ಪ್ರಮಾಣದ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.ಯ ಬಡ ರೈತ ನಂಜುಂಡಯ್ಯಸಾಲ ಸೋಲ ಮಾಡಿ ಎರಡು ಎಕರೆಗೆ ಏಲಕ್ಕಿ ಬಾಳೆಹಣ್ಣು ಬೆಳೆದಿದ್ದರು, ಆದರೆ ಮಂಗಳವಾರ ರಾತ್ರಿ ಏಕಾಏಕಿ ಆನೆಗಳು ಏಲಕ್ಕಿ ಬಾಳೆ ತೋಟಕ್ಕೆ ನುಗ್ಗಿದ್ದು ಬಾಳೆ ಗಿಡಗಳನ್ನು ತಿಂದು ಗಿಡಗಳನ್ನು ನಾಶ ಮಾಡಿವೆ.
ಇದರಿಂದ ನಂಜುಂಡಯ್ಯ ಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳು ಕಾಡು ಪ್ರಾಣಿಗಳು ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.