ಬಾಳೆಹಣ್ಣು ವ್ಯಾಪಾರಿ ಮಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಬಂಗಾರ

| Published : Aug 11 2024, 01:34 AM IST

ಸಾರಾಂಶ

ಹೊಳೆನರಸೀಪುರ ಪಟ್ಟಣದ ಮಾರುಕಟ್ಟೆಯಲ್ಲಿನ ಬಾಳೆಹಣ್ಣಿನ ಸಗಟು ವ್ಯಾಪಾರಿ ಸತೀಶ್ ಅವರ ಪುತ್ರಿ ಎಸ್.ದೀಕ್ಷಿತಾ ಅವರು ತುಮಕೂರು ವಿವಿಯ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಪಡೆದು ಚಿನ್ನದ ಮೆಡಲ್ ಮುಡಿಗೇರಿಸಿಕೊಂಡಿದ್ದಾರೆ. ತಾಲೂಕಿನ ಕಡಿವಿನಕೋಟೆ ಗ್ರಾಮದ ನಿವಾಸಿಯಾಗಿದ್ದು, ಸರಕಾರಿ ಕನ್ನಡ ಶಾಲೆಯಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ನಂತರ ತುಮಕೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದ್ದಾರೆ. ಪೋಷಕರ ಕಷ್ಟ ಅರ್ಥ ಮಾಡಿಕೊಂಡು ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ಸಾಧನೆ ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಮಾರುಕಟ್ಟೆಯಲ್ಲಿನ ಬಾಳೆಹಣ್ಣಿನ ಸಗಟು ವ್ಯಾಪಾರಿ ಸತೀಶ್ ಅವರ ಪುತ್ರಿ ಎಸ್.ದೀಕ್ಷಿತಾ ಅವರು ತುಮಕೂರು ವಿವಿಯ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಪಡೆದು ಚಿನ್ನದ ಮೆಡಲ್ ಮುಡಿಗೇರಿಸಿಕೊಂಡಿದ್ದಾರೆ.

ಇತ್ತೀಚೆಗೆ ತುಮಕೂರು ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನಗೊಳಿಸಿದ್ದು, ಆಹಾರ ಮತ್ತು ಪೋಷಣೆ (ಫುಡ್ ಅಂಡ್ ನ್ಯೂಟ್ರೀಶಿಯನ್) ವಿಷಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್‌ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಾಲೂಕಿನ ಕಡಿವಿನಕೋಟೆ ಗ್ರಾಮದ ನಿವಾಸಿಯಾಗಿದ್ದು, ಸರಕಾರಿ ಕನ್ನಡ ಶಾಲೆಯಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ನಂತರ ತುಮಕೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದ್ದಾರೆ. ಪೋಷಕರ ಕಷ್ಟ ಅರ್ಥ ಮಾಡಿಕೊಂಡು ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ಸಾಧನೆ ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.