ಮಹಿಳೆಯರಿಂದ ನಡೆದ ಬನಶಂಕರಿದೇವಿ ರಥೋತ್ಸವ

| Published : Jun 07 2024, 12:36 AM IST

ಸಾರಾಂಶ

ಇಳಕಲ್ಲ: ದೇವಾಂಗ ಸಮಾಜದ ಕುಲದೇವತೆ ಆದಿಶಕ್ತಿ ಶ್ರೀ ಬನಶಂಕರಿದೇವಿ ಅವತರಿಸಿದ ದಿನದ ಅಂಗವಾಗಿ ನಗರದ ಸಾಲಪೇಟ, ಗುಬ್ಬಿಪೇಟ, ಮುನವಳ್ಳಿಪೇಟ ಹಾಗೂ ಕೊಪ್ಪರದ ಪೇಟ ಶೀ ಬನಶಂಕರಿ ದೇವಸ್ಥಾನಗಲ್ಲಿ ದೇವಿಗೆ ಬೆಳಿಗ್ಗೆ ಮಾವಿನ ಹಣ್ಣಿನ ಸೀಕರಣಿ ಅಭಿಷೇಕ, ಲಲಿತಾ ಬಳಗದ ತಾಯಂದಿರಿಂದ ಲಲಿತಾ ಸಹಸ್ರನಾಮ ಪಠಣ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇಳಕಲ್ಲ: ದೇವಾಂಗ ಸಮಾಜದ ಕುಲದೇವತೆ ಆದಿಶಕ್ತಿ ಶ್ರೀ ಬನಶಂಕರಿದೇವಿ ಅವತರಿಸಿದ ದಿನದ ಅಂಗವಾಗಿ ನಗರದ ಸಾಲಪೇಟ, ಗುಬ್ಬಿಪೇಟ, ಮುನವಳ್ಳಿಪೇಟ ಹಾಗೂ ಕೊಪ್ಪರದ ಪೇಟ ಶೀ ಬನಶಂಕರಿ ದೇವಸ್ಥಾನಗಲ್ಲಿ ದೇವಿಗೆ ಬೆಳಿಗ್ಗೆ ಮಾವಿನ ಹಣ್ಣಿನ ಸೀಕರಣಿ ಅಭಿಷೇಕ, ಲಲಿತಾ ಬಳಗದ ತಾಯಂದಿರಿಂದ ಲಲಿತಾ ಸಹಸ್ರನಾಮ ಪಠಣ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ನಗರದ ಗುಬ್ಬಿಪೇಟೆಯ ಶಂಕರಿ ರಾಮಲಿಂಗ ದೇವಸ್ಥಾನದಲ್ಲಿ ಶ್ರೀ ಬನಶಂಕರಿದೇವಿಯ ಬೆಳ್ಳಿ ಅಂಬಾರಿ ರಥೋತ್ಸವವನ್ನು ಮಹಿಳೆಯರೇ ನೆರವೇರಿಸಿದ್ದು ಅತ್ಯಂತ ವಿಶೇಷವಾಗಿತ್ತು. ಈ ವಿಶೇಷ ಕಾರ್ಯಕ್ರಮ ವೇದಮೂರ್ತಿ ಮುನಿಸ್ವಾಮಿಗಳು ದೇವಾಂಗಮಠ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರಾದ ಶಂಕ್ರಣ್ಣ ಮೇದಕೇರಿ, ವಿಠ್ಠಲ ಅರಳಿಕಟ್ಟಿ, ಅಶೊಕ ಬಿಜ್ಜಲ, ಶಿವಪುತ್ರಪ್ಪ ಕರ್ಜಗಿ, ಪಂಪಣ್ಣ ಚಿಂಚಮಿ, ಟಿ.ಎಂ.ರಾಮದುರ್ಗ, ಶಂಕರಪ್ಪ ಕಡೂರ, ಪುಲಿಕೇಶ ಚಳಿಗೇರಿ, ಮಹಾಂತೇಶ ಕರ್ಜಗಿ, ನಾರಾಯಣ ಬಿಜ್ಜಲ, ಪರೀಕ್ಷಿತರಾಜ ಧೂಪದ, ಸೋಮು ಮೂರಂಕಣದ ಮತ್ತು ಯುವಕರು, ಲಲಿತಾ ಬಳಗದ ತಾಯಂದಿರು ಪಾಲ್ಗೊಂಡಿದ್ದರು.