ಅದ್ಧೂರಿಯಿಂದ ಜರುಗಿದ ದೋಟಿಹಾಳದ ಬನಶಂಕರಿದೇವಿ ರಥೋತ್ಸವ

| Published : Mar 01 2024, 02:21 AM IST

ಅದ್ಧೂರಿಯಿಂದ ಜರುಗಿದ ದೋಟಿಹಾಳದ ಬನಶಂಕರಿದೇವಿ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬನಶಂಕರಿದೇವಿ ಜಾತ್ರೆ ಅಂಗವಾಗಿ ದೇವಿಗೆ ಬೆಳಿಗ್ಗೆಯಿಂದ ವಿಶೇಷ ಪೂಜೆ, ಅಭೀಷೇಕ ಮುಂತಾದ ಪೂಜೆಗಳು, ರಥದ ಮುಂದೆ ಹೋಮ ಹವನಗಳು ಇನ್ನಿತರ ಪೂಜಾ ಕಾರ್ಯಕ್ರಮಗಳು, ಕೈಂಕರ್ಯಗಳು ನಡೆದವು.

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯ ದೇವತೆ ಬನಶಂಕರಿದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಸಂಜೆ ಮಹಾ ರಥೋತ್ಸವವು ಸಾವಿರಾರು ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿತು.ಬನಶಂಕರಿದೇವಿ ಜಾತ್ರೆ ಅಂಗವಾಗಿ ದೇವಿಗೆ ಬೆಳಿಗ್ಗೆಯಿಂದ ವಿಶೇಷ ಪೂಜೆ, ಅಭೀಷೇಕ ಮುಂತಾದ ಪೂಜೆಗಳು, ರಥದ ಮುಂದೆ ಹೋಮ ಹವನಗಳು ಇನ್ನಿತರ ಪೂಜಾ ಕಾರ್ಯಕ್ರಮಗಳು, ಕೈಂಕರ್ಯಗಳು ನಡೆದವು. ಭಕ್ತರು ತೆಂಗಿನಕಾಯಿ, ನೈವೇದ್ಯ ಅರ್ಪಿಸಿ ದೇವಿಯ ದರ್ಶನ ಪಡೆದುಕೊಂಡು ಪುನೀತರಾದರು. ಜಾತ್ರೆಯಲ್ಲಿ ವಿವಿಧ ಗ್ರಾಮಗಳಿಂದ ಅನೇಕ ಸಹಸ್ರಾರು ಜನರು ಪಾಲ್ಗೊಂಡಿದ್ದರು.ಭಕ್ತರು ಬೆಳಗಿನಜಾವ ಪವಿತ್ರ ಸ್ನಾನ ಮಾಡಿ ದೇವಸ್ಥಾನದವರೆಗೂ ಮಡಿ ಬಟ್ಟೆಯಲ್ಲಿ ಆಗಮಿಸಿ ವಿವಿಧ ಪೂಜೆ ಸಲ್ಲಿಸಿದರು. ಇನ್ನು ಕೆಲವು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ದೇವಿಗೆ ಹರಕೆ ತೀರಿಸಿದರು.ಬನಶಂಕರಿದೇವಿ ರಥವನ್ನು ಹೂಮಾಲೆ, ತೆಂಗಿನ ಗರಿಗಳಿಂದ ಸಿಂಗರಿಸಲಾಗಿತ್ತು. ರಥೋತ್ಸವ ಜರುಗುವಾಗ ಸಾವಿರಾರು ಭಕ್ತರ ಘೋಷಣೆಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರು, ದೋಟಿಹಾಳ, ಕೇಸೂರು, ಹೆಸರೂರು, ನಡಲಕೊಪ್ಪ, ಕ್ಯಾದಿಗುಪ್ಪ, ಗೋತಗಿ ಸೇರಿದಂತೆ ಸುತ್ತಮುತ್ತಲಿನ ಯುವಕರು ಮಹಿಳೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.