ಇಂದಿನಿಂದ ಬನಶಂಕರಿದೇವಿ ಜಾತ್ರಾಮಹೋತ್ಸವ

| Published : Jan 17 2024, 01:50 AM IST

ಸಾರಾಂಶ

ಇಳಕಲ್ಲ: ನಗರದ ಹಳೆ ಬನಶಂಕರಿದೇವಿ ದೇವಸ್ಥಾನದಲ್ಲಿ ಜ.17 ರಿಂದ 29ರವರಗೆ ಜಾತ್ರಾಮಹೋತ್ಸವ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಜ.17ರಂದು ಬೆಳಗ್ಗೆ ಘಟಸ್ಥಾಪನೆ, ಸಂಜೆ 6 ಗಂಟೆಗೆ ಸಿಂಹವಾಹನ ಧ್ವಜಾರೋಹಣ, ನಂತರ ಪಲ್ಲಕ್ಕಿ ಉತ್ಸವ(ಪ್ರತಿದಿನ ಸಂಜೆ 7 ಗಂಟೆಗೆ), ಜ.21 ಕಳಸ ಏರಿಸುವುದು, ಜ.24 ರಂದು ಸಂಜೆ 4 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ದಶಮಿದಿಂಡಿನ ಶ್ರೀದೇವಿಯ ಮೆರವಣಿಗೆ, ಜ.25ರಂದು ಬೆಳಗ್ಗೆ ಹೋಮ, ಉಚ್ಚಯ್ಯ ರಥೋತ್ಸವ, ಸಂಜೆ 5ಗಂಟೆಗೆ ಮಹಾರಥೋತ್ಸವ ಜರುಗಲಿದೆ.

ಇಳಕಲ್ಲ: ಇಳಕಲ್ಲ ನಗರದ ಶ್ರೀಹಳೆ ಬನಶಂಕರಿದೇವಿ ದೇವಸ್ಥಾನದಲ್ಲಿ ಜ.17 ರಿಂದ 29ರವರಗೆ ಜಾತ್ರಾಮಹೋತ್ಸವ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ಜ.17ರಂದು ಬೆಳಗ್ಗೆ ಘಟಸ್ಥಾಪನೆ, ಸಂಜೆ 6 ಗಂಟೆಗೆ ಸಿಂಹವಾಹನ ಧ್ವಜಾರೋಹಣ, ನಂತರ ಪಲ್ಲಕ್ಕಿ ಉತ್ಸವ(ಪ್ರತಿದಿನ ಸಂಜೆ 7 ಗಂಟೆಗೆ), ಜ.21 ಕಳಸ ಏರಿಸುವುದು, ಜ.24 ರಂದು ಸಂಜೆ 4 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ದಶಮಿದಿಂಡಿನ ಶ್ರೀದೇವಿಯ ಮೆರವಣಿಗೆ, ಜ.25ರಂದು ಬೆಳಗ್ಗೆ ಹೋಮ, ಉಚ್ಚಯ್ಯ ರಥೋತ್ಸವ, ಸಂಜೆ 5ಗಂಟೆಗೆ ಮಹಾರಥೋತ್ಸವ, ಜ.26ರಂದು ಕಡುಬಿನ ಕಾಳಗ, ಸಂಜೆ 7ಗಂಟೆಗೆ ಶ್ರೀದೇವಿಯ ಪಲ್ಲಕ್ಕಿ ಗಂಗೆ ಸ್ಥಳಕ್ಕೆ ಹೋಗಿ ಬರುವುದು, ಜ.27ರಂದು ಸಂಜೆ 7ಕ್ಕೆ ಹಾಲು ಓಕಳಿ ಜೊತೆಗೆ ಶ್ರೀದೇವಿಯ ಪಲ್ಲಕ್ಕಿಯೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ ಬರುವುದು ಹಾಗೂ ಜ.29ರಂದು ಸಂಜೆ 4 ಗಂಟೆಗೆ ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಳ್ಳುವುದು ಎಂದು ಪ್ರಕಟಣೆ ತಿಳಿಸಿದೆ.