ಬಾಣಾವರ: ವಿಜೃಂಭಣೆಯ ರಾಮೋತ್ಸವಕ್ಕೆ ತೆರೆ

| Published : Apr 16 2025, 12:32 AM IST

ಸಾರಾಂಶ

ಬಾಣಾವರದಲ್ಲಿ ಕಳೆದ 6 ರಿಂದ 15 ರ ವರೆಗೆ 11 ದಿನಗಳು ಶ್ರೀರಾಮ ಮಂದಿರದಲ್ಲಿ ವಿಜೃಂಭಣೆಯಲ್ಲಿ ಹಮ್ಮಿಕೊಂಡಿದ್ದ ವಸಂತ ಶ್ರೀ ರಾಮೋತ್ಸವ ವೈಭವದಿಂದ ನಡೆದು ಮಂಗಳವಾರ ಶ್ರೀ ರಾಮ ಪಟ್ಟಾಭಿಷೇಕದೊಂದಿಗೆ ತೆರೆ ಬಿದ್ದಿತು

ಅರಸೀಕೆರೆ: ಬಾಣಾವರದಲ್ಲಿ ಕಳೆದ 6 ರಿಂದ 15 ರ ವರೆಗೆ 11 ದಿನಗಳು ಶ್ರೀರಾಮ ಮಂದಿರದಲ್ಲಿ ವಿಜೃಂಭಣೆಯಲ್ಲಿ ಹಮ್ಮಿಕೊಂಡಿದ್ದ ವಸಂತ ಶ್ರೀ ರಾಮೋತ್ಸವ ವೈಭವದಿಂದ ನಡೆದು ಮಂಗಳವಾರ ಶ್ರೀ ರಾಮ ಪಟ್ಟಾಭಿಷೇಕದೊಂದಿಗೆ ತೆರೆ ಬಿದ್ದಿತು, ಈ ಯಶಸ್ಸಿಗೆ ಸಮಾಜ ಬಾಂಧವರು ಶ್ರೀರಾಮ ಭಕ್ತರ ಸಹಕಾರ ಕಾರಣವಾಗಿದೆ. ಎಂದು ಬಾಣಾವರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಎಸ್ ಗೋಪಾಲಕೃಷ್ಣ ಹೇಳಿದರು

ಅವರು ಮಂಗಳವಾರ ಶ್ರೀರಾಮ ತಾರಕ ಹೋಮ ಶ್ರೀರಾಮ ಪಟ್ಟಾಭಿಷೇಕದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಶ್ರೀರಾಮ ಮಹೋತ್ಸವ ಸೇವಾರ್ಥದಾರರ ಸಹಕಾರ ಕಾರಣವಾಗಿದೆ. ಸೋಮವಾರ ಸೀತಾ ಕಲ್ಯಾಣವೂ ಸಹ ನಡೆಯಿತು ಸಮಾಜದ ಎಲ್ಲ ಮಹಿಳೆಯರು ಪ್ರತಿಯೊಂದು ಕಾರ್ಯಕ್ರಮದಲ್ಲಿ ವಿಶೇಷ ಕಾಳಜಿ ವಹಿಸಿ ಪಾಲ್ಗೊಂಡು ಯಶಸ್ವಿಯಾಗಿ ನಡೆಸಿ ಕೊಟ್ಟರು, ವೇದಬ್ರಹ್ಮ ಸಿ.ವಿ ವೆಂಕಟಸುಬ್ರಮಣ್ಯ ಹಾಗೂ ಇತರರು ನಿತ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು, ಪ್ರತಿದಿನ ಬೆಳಗ್ಗೆ ಶ್ರೀ ಅವರಿಗೆ ರುದ್ರಾಭಿಷೇಕ ಶ್ರೀ ರಾಮಾಯಣ ಪಾರಾಯಣ ನವಗ್ರಹ ಜಪ ಸೂರ್ಯ ನಮಸ್ಕಾರ ಗಾಯಿತ್ರಿ ಜಪ ಶ್ರೀರಾಮ ತಾರಕ ಜಪ ಭಜನೆ ಅಷ್ಟಾವಧಾನ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಿತ್ಯ ಸುಲಲಿತವಾಗಿ ನಡೆಯಿತು, ಸೋಮವಾರ ಸೀತಾ ಕಲ್ಯಾಣ ಅದ್ಧೂರಿಯಾಗಿ ನಡೆಯಿತು, ಮುಂದಿನ ದಿನಗಳಲ್ಲಿಯೂ ಶ್ರೀರಾಮ ಭಕ್ತರ ಹಾಗೂ ಸಮಾಜ ಬಾಂಧವರ ಸೇವಾರ್ಥದಾರರ ಸಹಕಾರ ಹೀಗೆ ಇರಲಿ ಎಂದು ಅವರು ಆಶಿಸಿದರು

ಕಾರ್ಯದರ್ಶಿ ವೇದ ಬ್ರಹ್ಮ ಹರೀಶ್ ಶರ್ಮಾ ನಿತ್ಯ ಕಾರ್ಯಕ್ರಮಗಳು ನಡೆಯಲು ಸಮಯ ಪಾಲನೆ ಬಹಳ ಮುಖ್ಯವಾಗಿತ್ತು. ಎಲ್ಲರೂ ಸಹಕರಿಸಿದರು ಮತ್ತು ಇಂದಿನ ಶ್ರೀರಾಮ ಪಟ್ಟಾಭಿಷೇಕ ಹೋಮಾದಿ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು ಇದು ಎಲ್ಲರೂ ತೋರಿದ ಶ್ರದ್ಧಾಭಕ್ತಿ ಕಾರಣವಾಗಿದೆ. ಎಂದರು.

ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಅರಸೀಕೆರೆ ಬೇರೆಯಲ್ಲ ಬಾಣವರ ಬೇರೆ ಅಲ್ಲ ಇಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬಹಳ ವ್ಯವಸ್ಥಿತವಾಗಿ ಶ್ರದ್ಧಾಭಕ್ತಿಯಿಂದ ನಡೆಸುತ್ತಾ ಬಂದಿದ್ದೀರಿ ನಮ್ಮ ತಾಲೂಕು ಬ್ರಾಹ್ಮಣ ಸಂಘದಿಂದ ನಿಮಗೆ ಸಹಕಾರವಿರುತ್ತದೆ, ಇಂದು ನಮಗೂ ಈ ಒಂದು ಸುಸಂದರ್ಭದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಕ್ಕೆ ಕೃತಜ್ಞರಾಗಿದ್ದೇವೆ ಎಂದರು

ತಾಲೂಕು ಕಾರ್ಯದರ್ಶಿ ಸುಬ್ರಹ್ಮಣ್ಯ ನಿರ್ದೇಶಕರಾದ ಹರೀಶ್ ಡಿ.ಎಸ್ ರಾಮಸ್ವಾಮಿ, ಬಾಣಾವರ ಸಂಘದ ಸಹ ಕಾರ್ಯದರ್ಶಿ, ಬಿ ಎಸ್ ಸುಬ್ಬಾಭಟ್ಟ ಮೊದಲಾದವರು ಉಪಸ್ಥಿತರಿದ್ದರು.