ತುಮಕೂರು ಜಿಲ್ಲೆಯಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳು ಹಾಗೂ ಸಾಮಾಜಿಕ ಹೋರಾಟಗಳ ರಥವನ್ನು ಎಳೆದ ಹೋರಾಟಗಾರರಲ್ಲಿ ಬಂದಕುಂಟೆ ನಾಗರಾಜಯ್ಯ ಅಗ್ರಪಂಥಿಯಲ್ಲಿದ್ದಾರೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ತುಮಕೂರು ಜಿಲ್ಲೆಯಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳು ಹಾಗೂ ಸಾಮಾಜಿಕ ಹೋರಾಟಗಳ ರಥವನ್ನು ಎಳೆದ ಹೋರಾಟಗಾರರಲ್ಲಿ ಬಂದಕುಂಟೆ ನಾಗರಾಜಯ್ಯ ಅಗ್ರಪಂಥಿಯಲ್ಲಿದ್ದಾರೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.ಪಟ್ಟಣದ ಕನ್ನಡ ಭವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಹಾಗು ಆದಿಜಾಂಬವ ಸಂಘದ ವತಿಯಿಂದ ದಲಿತ ಹೋರಾಟಗಾರ ಬಂದಕುಂಟೆ ನಾಗರಾಜಯ್ಯನವರ ನುಡಿ ನಮನ ಕಾರ್ಯುಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಸಾಕಷ್ಟು ದಲಿತ ಹೋರಾಟಗಾರರು ತಮ್ಮ ಸಮುದಾಯದ ಜನರ ನೋವುಗಳ ವಿರುದ್ದ ಧ್ವನಿ ಎತ್ತಿ ಹೋರಾಟ ಮಾಡಿದ್ದಾರೆ. ಅದೇ ರೀತಿ ಬಂದಕುಂಟೆ ನಾಗರಾಜಯ್ಯನವರ ಹೋರಾಟದ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ಇವರು ಜಿಲ್ಲೆಯಾದ್ಯಂತ ನಡೆದ ದಲಿತರ ಮೇಲಿನ ಹಲ್ಲೆ, ಶೋಷಣೆ, ಅಸ್ಪೃಶ್ಯತೆ ಆಚರಣೆ, ಭೂ ಹೋರಾಟ ಸೇರಿದಂತೆ ಹಲವು ಚಳವಳಿಗಳನ್ನು ರೂಪಿಸಿ ದಲಿತರಿಗೆ ನ್ಯಾಯ ಕೊಡಿಸಲು ಸತತ ಪ್ರಯತ್ನ ನಡೆಸಿದರು. ಇದನ್ನು ಅವರು ಬರೆದ ಬಿತ್ತನೆ ಬೀಜ ಎಂಬ ಆತ್ಮಕಥನ ಕೃತಿಯಲ್ಲಿ ಕಾಣಬಹುದು ಎಂದರು.ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ವಿ.ಟಿ.ವೆಂಕಟರಾಮಯ್ಯ, ಚಂದ್ರಯ್ಯ, ಚಿದಾನಂದ್, ಬೋರಪ್ಪ, ಶಿವಶೇಖರ್, ಪ್ರವೀಣ್ ಸೋಮಲಾಪುರ, ಡಿ.ಆರ್. ಲಕ್ಷ್ಮೀಶ್, ಪುಟ್ಟಯಲ್ಲಯ್ಯ, ಎನ್.ಬಿ.ರಾಮಕೃಷ್ಣಯ್ಯ, ಕಲ್ಕೆರೆ ಮೂರ್ತಿ, ಅರಿಶಿದಹಳ್ಳಿ ಕೆಂಪಣ್ಣ, ಹರೀಶ್ ಮೇಲನಹಳ್ಳಿ, ಗೋವಿಂದರಾಜು, ವಿನಯ್, ಹೆಗ್ಗೆರೆ ರಾಮಚಂದ್ರು ಪಾಲ್ಗೊಂಡಿದ್ದರು.