ಸಾರಾಂಶ
ಲಿಂಗಸುಗೂರು ಪಟ್ಟಣದಲ್ಲಿ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯಿಂದ ಬೃಹತ್ ಮೆರವಣಿಗೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸುಪ್ರೀಂ ಕೋಟ್೯ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಲಿಂಗಸುಗೂರು ಬಂದ್ ಹೋರಾಟ ಯಶ್ವಸಿಯಾಗಿ ಕಂಡು ಬಂದಿತು.ಪಟ್ಟಣದಲ್ಲಿ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯಿಂದ ಲಿಂಗಸುಗೂರು ಬಂದ್ ಕರೆ ನೀಡಲಾಗಿತ್ತು, ಇದಕ್ಕೆ ಬೆಂಬಲವಾಗಿ ವತ೯ಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದರು. ಬಸ್ ಸಂಚಾರ ನಿಲ್ಲಿಸಲಾಗಿತ್ತು. ಅಟೋ ಹಾಗೂ ಖಾಸಗಿ ವಾಹನಗಳು ಸಹ ರಸ್ತೆಗೆ ಇಳಿಯದೆ ಬಂದ್‌ಗೆ ಬೆಂಬಲಿಸಿದರು.
ಬಹಿರಂಗ ಸಭೆಯಲ್ಲಿ ಹಿರಿಯ ಹೋರಾಟಗಾರ ಪಾಮಯ್ಯ ಮುರಾರಿ ಮಾತನಾಡಿ, 30ಕ್ಕೂ ಹೆಚ್ಚು ವಷ೯ಗಳ ಹೋರಾಟ ನಡೆಸಿದ ಫಲವಾಗಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸಲು ಸಂಪೂಣ ಅಧಿಕಾರ ರಾಜ್ಯ ಸಕಾ೯ರಕ್ಕೆ ಇದೇ ಎಂದು ಆದೇಶ ನೀಡಿದ್ದು, ರಾಜ್ಯ ಸಕಾ೯ರ ಒಳ ಮೀಸಲಾತಿ ಜಾರಿಗೊಳಿಸದೆ ಕಾಲಹರಣ ಮಾಡುತ್ತಿದೆ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲವಾದಲಿ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಒಳ ಮೀಸಲಾತಿ ಐಕ್ಯ ಸಮಿತಿಯ ಕಾಯ೯ಕತ೯ರು ಪ್ರವಾಸ ಮಂದಿರದಿಂದ ಗಡಿಯಾರ ವೃತ್ತದ ಮೂಲಕ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣೆಗೆ ನಡೆಸಿದರು.
ಈ ವೇಳೆ ಎಚ್.ಬಿ ಮುರಾರಿ, ಲಿಂಗಪ್ಪ ಪರಂಗಿ, ಮೊಹನ್, ತಿಪ್ಪಣ್ಣ, ಸೋಮನಮರಡಿ, ಅನಿಕುಮಾರ, ಕುಪ್ಪಣ್ಣ ಹೊಸಮನಿ, ನಾಗಪ್ಪ ಈಚನಾಳ, ಸಂಜೀವಪ್ಪ ಹುನಕುಂಟಿ, ಜಂಬಣ್ಣ ದೊಡ್ಡಮನಿ, ಹುಸೇನಪ್ಪ ಯರಡೋಣಿ, ಆನಂದ ಮುದಗಲ್, ಯೋಗಪ್ಪ ಹಟ್ಟಿ, ಆಂಜನೇಯ ಭಂಡಾರಿ, ಮಾಹಾದೇವಪ್ಪ ಪರಾಂಪುರ, ಯಂಕಪ್ಪ ಚಿತ್ತಾಪೂರ, ನಾಗರಾಜ ಮಾಳಿ ಸೇರಿದಂತೆ ಇದ್ದರು.