ಬಾಂಧವ್ಯ ಟ್ರೋಫಿ ಕ್ರಿಕೇಟ್ ಪಂದ್ಯಾಟ: ಎಂಜಿನಿಯರ್ಸ್ ಚಾಂಪಿಯನ್, ಪಿಇಟಿ ರನ್ನರ್ಸ್

| Published : Feb 14 2025, 12:31 AM IST

ಬಾಂಧವ್ಯ ಟ್ರೋಫಿ ಕ್ರಿಕೇಟ್ ಪಂದ್ಯಾಟ: ಎಂಜಿನಿಯರ್ಸ್ ಚಾಂಪಿಯನ್, ಪಿಇಟಿ ರನ್ನರ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನಲ್ಲಿ ನಡೆದ ೮ನೇ ವರ್ಷದ ನಾಕೌಟ್ ಮಾದರಿಯ ೧೬ ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಇಂಜಿನಿಯರ್ಸ್ ಇಲೆವೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಿಇಟಿ ಇಲೆವೆನ್ ರನ್ನರ್ ಅಪ್ ಆಗಿ ಟ್ರೋಫಿ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರಿನ ನೆಹರೂ ನಗರದ ವಿವೇಕಾನಂದ ಕಾಲೇಜು ಮೈದಾನದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಕರಿಯ ಎಂ.ಎ, ಪ್ರಶಾಂತ್ ರೈ ಮತ್ತು ಪತ್ರಕರ್ತ ಫಾರೂಕ್ ಶೇಖ್ ಮುಕ್ವೆ ನೇತೃತ್ವದಲ್ಲಿ, ಭಾಂಧವ್ಯ ಫ್ರೆಂಡ್ಸ್ ಹಾಗೂ ವಿವಿಧ ಇಲಾಖೆಗ ಸಹಭಾಗಿತ್ವದಲ್ಲಿ ನಡೆದ ೮ನೇ ವರ್ಷದ ನಾಕೌಟ್ ಮಾದರಿಯ ೧೬ ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಇಂಜಿನಿಯರ್ಸ್ ಇಲೆವೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಿಇಟಿ ಇಲೆವೆನ್ ರನ್ನರ್ ಅಪ್ ಆಗಿ ಟ್ರೋಫಿ ಪಡೆದುಕೊಂಡಿತು.

ಕ್ರೀಡಾಕೂಟದಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದು, ಇಂಜಿನಿಯರ್ಸ್ ಇಲೆವೆನ್ ತಂಡ ಚಾಂಪಿಯನ್ ಆಗಿ ಟ್ರೋಫಿ ಪಡೆದುಕೊಂಡಿತು. ಪಿಇಟಿ ಇಲೆವೆನ್ ರನ್ನರ್ ಅಪ್ ಟ್ರೋಫಿ ಪಡೆದುಕೊಳ್ಳುವುದರೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ವರ್ತಕರ ಸಂಘ ಹಾಗೂ ಚತುರ್ಥ ಸ್ಥಾನವನ್ನು ಕ್ಯಾಂಪ್ಕೋ ಇಲೆವೆನ್ ಪಡೆದುಕೊಂಡಿತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ರು. ೧೫,೦೨೫ ನಗದು ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರು. ೧೦,೦೨೫ ನಗದು ಹಾಗೂ ಬಾಂಧವ್ಯ ಟ್ರೋಫಿ, ತೃತೀಯ ಸ್ಥಾನ ತಂಡಕ್ಕೆ ರು. ೮,೦೨೫ ನಗದು ಹಾಗೂ ಬಾಂಧವ್ಯ ಟ್ರೋಫಿ, ಚತುರ್ಥ ಸ್ಥಾನ ಪಡೆದ ತಂಡಕ್ಕೆ ರು. ೬೦೨೫ ನಗದು ಹಾಗೂ ಬಾಂಧವ್ಯ ಟ್ರೋಫಿ ನೀಡಿ ಗೌರವಿಸಲಾಯಿತು.

ಇದರೊಂದಿಗೆ ಬೆಸ್ಟ್ ಬೌಲರ್ ಪಿಇಟಿ ಇಲೆವೆನ್ ತಂಡದ ಲೊಕೇಶ್, ಸರಣಿ ಶ್ರೇಷ್ಠ ಇಂಜಿನಿಯರ್ ಇಲೆವೆನ್ ತಂಡದ ಲೋಕೇಶ್, ಅತ್ಯುತ್ತಮ ಬ್ಯಾಟ್ಸ್ಮನ್ ಅಕ್ಷಯ್, ಮ್ಯಾನ್ ಆಫ್ ದ ಮ್ಯಾಚ್ ಇಂಜಿನಿಯರ್ಸ್ ಇಲೆವೆನ್ ತಂಡದ ಮಿಥುನ್ ಪಡೆದುಕೊಂಡರು.