ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು-ಚೆನ್ನೈ ನೂತನ ವಂದೇ ಭಾರತ್ ರೈಲು ಮಾ.14ರಿಂದ ಎಸ್‌ಎಂವಿಟಿ ಬೆಂಗಳೂರು- ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದ ನಡುವೆ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ದರವನ್ನು ನೈರುತ್ಯ ರೈಲ್ವೆ ಪ್ರಕಟಿಸಿದೆ.ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ - ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ (353 ಕಿ.ಮೀ.) ಚೇರ್‌ಕಾರ್ ₹985, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹1855 ನಿಗದಿಸಲಾಗಿದೆ. ಎಸ್‌ಎಂವಿಟಿ- ಕಟ್ಪಾಡಿ ರೈಲ್ವೆ ಸ್ಟೇಷನ್ (223 ಕಿ.ಮೀ.) ನಡುವೆ ಚೇರ್‌ಕಾರ್ ₹765, ಎಕ್ಸಿಕ್ಯೂಟಿವ್ ಕ್ಲಾಸ್ ₹1420 ದರವಿದೆ. ಎಸ್‌ಎಂವಿಟಿ - ಕೃಷ್ಣರಾಜಪುರಂ (5 ಕಿ.ಮೀ.) ಚೇರ್‌ಕಾರ್‌ಗೆ ₹365, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ ₹690 ನಿಗದಿಸಲಾಗಿದೆ.
ಮೈಸೂರಿನಲ್ಲಿ ನಡೆಯುತ್ತಿರುವ ರೈಲ್ವೆ ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೊಸ ವಂದೇ ಭಾರತ್ ರೈಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಹಾಗೂ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ಮಾತ್ರ ಸಂಚರಿಸಲಿದೆ. ಬಳಿಕ ಏ.5ರಿಂದ ಈ ರೈಲು ಮೈಸೂರಿನವರೆಗೆ ವಿಸ್ತರಣೆಯಾಗಲಿದ್ದು, ದರಪಟ್ಟಿ, ನಿಲುಗಡೆ ಬದಲಾಗಲಿದೆ.ಪ್ರಧಾನಿ ಮೋದಿ ಚಾಲನೆ
ಮೈಸೂರು-ಚೆನ್ನೈ ನಡುವಣ ಎರಡನೇ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವರ್ಚುಚಲ್ ಮೂಲಕ ಚಾಲನೆ ನೀಡಿದ್ದಾರೆ.ಸದ್ಯ ಓಡುತ್ತಿರುವ ಮೈಸೂರು - ಚೆನ್ನೈ ವಂದೇ ಭಾರತ್ ಶೇ.85-ಶೇ.90ರಷ್ಟು ಪ್ರಯಾಣಿಕರಿಂದ ಭರ್ತಿ ಆಗುತ್ತಿದೆ. ಇದೇ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ದೊರೆತಿದೆ. ಇನ್ನು ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲಿನ ಸಂಚಾರಕ್ಕೂ ಅವರು ಚಾಲನೆ ನೀಡಿದರು. ಎರಡೂ ರೈಲುಗಳು ಉದ್ಘಾಟನಾ ಸಂಚಾರ ನಡೆಸಿವೆ.
ಜತೆಗೆ, ನಾಗವಾರ ಬಳಿಯ ಥಣಿಸಂದ್ರದಲ್ಲಿ ₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ವಹಣೆ ಮತ್ತು ದುರಸ್ತಿ ಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿತು. ಜೊತೆಗೆ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಹಾಗೂ ಬಂಗಾರಪೇಟೆ ನಿಲ್ದಾಣದಲ್ಲಿ ತಲಾ ಒಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಅನಾವರಣಗೊಂಡವು. ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 40 ಮಳಿಗೆಗಳಿಗೆ ಮೋದಿ ವರ್ಚುವಲ್ ಮೂಲಕ ಚಾಲನೆ ಕೊಟ್ಟರು.ಯಶವಂತಪುರ-ಮುಜಾಫರ್‌ಪುರಕ್ಕೆ2 ದಿನ ಹೋಳಿ ವಿಶೇಷ ರೈಲು ಸೇವೆಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಣಕ್ಕೆ ಮುಜಾಫರ್‌ಪುರ - ಯಶವಂತಪುರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ಹೋಳಿ ವಿಶೇಷ ರೈಲುಗಳನ್ನು ಓಡಿಸಲು ಪೂರ್ವ ಮಧ್ಯ ರೈಲ್ವೆ ನಿರ್ಧರಿಸಿದೆ.ಮಾರ್ಚ್ 29, ಏ.5ರಂದು (05271) ಮುಜಾಫರ್‌ಪುರ ನಿಲ್ದಾಣದಿಂದ ಮಧ್ಯಾಹ್ನ 3:30ಕ್ಕೆ ಹೊರಟು ಭಾನುವಾರ ಸಂಜೆ 7ಕ್ಕೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ. ಏ.1 ಮತ್ತು ಏ.8ರಂದು (05272) ಯಶವಂತಪುರದಿಂದ ಬೆಳಗ್ಗೆ 7.30ಕ್ಕೆ ಹೊರಟು ಬುಧವಾರ 12ಕ್ಕೆ ತನ್ನ ಮುಜಾಫರ್‌ಪುರ ನಿಲ್ದಾಣ ತಲುಪಲಿದೆ.ಈ ವಿಶೇಷ ರೈಲಿನಲ್ಲಿ ಎಸಿ-2 ಟೈಯರ್ (2), ಎಸಿ-3 ಟೈಯರ್ (4), ಎಸಿ-2 ಟೈಯರ್ ಕಮ್ ಎಸಿ-3 ಟೈಯರ್ (3), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ದ್ವಿತೀಯ ದರ್ಜೆ (2) ಮತ್ತು ಎಸ್ಎಲ್ಆರ್ ಡಿ (2) ಸೇರಿದಂತೆ ಒಟ್ಟು 20 ಬೋಗಿಗಳು ಇರಲಿವೆ.