ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎ.ಶಿವಕುಮಾರ್ ನೇತೃತ್ವದಲ್ಲಿ ಐ.ಡಿ.ಹಳ್ಳಿ ಹೋಬಳಿ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಗರಣಿ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭವಾರ್ತೆ ಮಧುಗಿರಿ

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎ.ಶಿವಕುಮಾರ್ ನೇತೃತ್ವದಲ್ಲಿ ಐ.ಡಿ.ಹಳ್ಳಿ ಹೋಬಳಿ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಗರಣಿ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ತಾಲೂಕು ಅಧ್ಯಕ್ಷ ಎ.ಶಿವಕುಮಾರ್ ಮಾತನಾಡಿ, ಕನ್ನಡ ನಾಡು, ನುಡಿ, ಜಲ ಹಾಗೂ ಭಾಷೆಯನ್ನು ಉಳಿಸಿ ಬೆಳಸುವ ಕೆಲಸವನ್ನು ಮಾಡಬೇಕು. ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಭಾಷೆಗೆ ಧಕ್ಕೆ ಉಂಟಾದರೆ ತಕ್ಷಣ ಹೋರಾಟ ಮಾಡಬೇಕು. ಕನ್ನಡ ಬೆಳೆಸುವ ಕೆಲಸ ಎಲ್ಲರಿಂದಾಗಬೇಕು ಎಂದರು.

ಐ.ಡಿ.ಹಳ್ಳಿ ಹೋಬಳಿ ನೂತನ ಅಧ್ಯಕ್ಷ ಗರಣಿ ಶ್ರೀನಿವಾಸ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯ ಗುರಿ ನಾಡಿನ ನೆಲ, ಜಲ ,ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆಯಾಗುವ ಯಾವುದೇ ಸಂದರ್ಭದಲ್ಲೂ ಹೋರಾಟ ನೆಡೆಸಲು ಸದಾ ಕಂಕಣಬದ್ದರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಗರಣಿ ಗ್ರಾಪಂ ಉಪಾಧ್ಯಕ್ಷ ರಾಜಣ್ಣ, ಹನುಮಂತರಾಯಪ್ಪ, ರಂಗರಾಜು, ಶಿವ, ಅರ್ಜುನ್, ವಿಡಿಯೋಗ್ರಾಫರ್ ರಂಗನಾಥ್, ರಾಘವೇಂದ್ರ, ಮಹೇಂದ್ರ, ನಾಗಭೂಷಣ್, ಸಿ.ಎ.ಹರೀಶ್ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.