ಬಂಗಾರಪೇಟೆ: ಪೊಲೀಸ್‌, ಬಿಎಸ್‌ಎಫ್‌ ಪಥಸಂಚಲ

| Published : Mar 22 2024, 01:02 AM IST

ಬಂಗಾರಪೇಟೆ: ಪೊಲೀಸ್‌, ಬಿಎಸ್‌ಎಫ್‌ ಪಥಸಂಚಲ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರು ನಿರ್ಭಯವಾಗಿ ಮುಕ್ತ ಮತದಾನ ಮಾಡಬೇಕು. ಜನತೆಗೆ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಮತ್ತು ಬಿಎಸ್‌ಎಫ್ ಸದಾ ಬದ್ಧವಾಗಿರುತ್ತದೆ. ಆತಂಕ ಮುಕ್ತ ಮತದಾನ ಎಲ್ಲರ ಜವಾಬ್ದಾರಿ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಹಿಸಿದ್ದು ನಾಗರೀಕರಲ್ಲಿ ಧೈರ್ಯ ತುಂಬಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಈ ವೇಳೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾತನಾಡಿ, ಬಲಿಷ್ಠ, ಸುಭದ್ರ, ರಾಷ್ಟ್ರದ ಭವಿಷ್ಯವನ್ನು ರಚಿಸಲು ಮತದಾನ ಆಧಾರ ಸ್ತಂಭವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಮತದಾರರು ನಿರ್ಭಯವಾಗಿ ಮುಕ್ತ ಮತದಾನ ಮಾಡಬೇಕು. ಸಾರ್ವಜನಿಕರು ಧೃತಿಗೆಡದೆ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ಮಾಡಲು ಪ್ರೇರಪಿಸು ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಿಎಸ್‌ಎಫ್‌ ಸಹಯೋಗ

ಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಜನರಲ್ಲಿನ ಆತಂಕವನ್ನು ದೂರ ಮಾಡಿ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಿ ಧೈರ್ಯ ತುಂಬುವ ನಿಟ್ಟಿನಲ್ಲಿ ಬಿಎಸ್‌ಎಫ್‌ ಸಹಯೋಗದಲ್ಲಿ ಬಂಗಾರಪೇಟೆ ಹಾಗೂ ಕೆಜಿಎಫ್ ಪೊಲೀಸ್ ಇಲಾಖೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿತು.

ಯಾವುದೇ ಆಮಿಷ ಬೆದರಿಕೆ ದಬ್ಬಾಳಿಕೆಗಳಿಗೆ ಭಯಪಡಬಾರದು ಜನತೆಗೆ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಮತ್ತು ಬಿಎಸ್‌ಎಫ್ ಸದಾ ಬದ್ಧವಾಗಿರುತ್ತದೆ. ಆತಂಕ ಮುಕ್ತ ಮತದಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೆಜಿಎಫ್ ಹಾಗೂ ಬಂಗಾರಪೇಟೆ ಕ್ಷೇತ್ರದಲ್ಲಿ ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ಪಿ ಪಾಂಡುರಂಗ, ಪೊಲೀಸ್ ನಿರೀಕ್ಷಕ ನಂಜಪ್ಪ, ಪುರುಷೋತ್ತಮ್, ಕೃಷ್ಣಪ್ಪ, ಮಂಜುನಾಥ್, ಲಕ್ಷ್ಮಿನಾರಾಯಣ, ಹಾಗೂ ಇನ್ಸ್ಪೆಕ್ಟರ್‌ಗಳಾದ ಸುನೀಲ್, ರೇವಣಸಿದ್ದಪ್ಪ, ಸಂಗಮೇಶ್, ಅಪ್ಪಲಾಲ್, ಮಂಜಣ್ಣ, ಜಗದೀಶ್ , ನಾಗಪ್ಪ, ಪಾಲಾಕ್ಷ, ಗುರುರಾಜ್ ಹಾಗೂ ಎಸ್.ಬಿ. ನಾಗೇಶ್ ಇದ್ದರು.