ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನಾಡು ಕಂಡ ಅಪ್ರತಿಮ ರಾಜಕಾರಣಿ. ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಮಧು ಬಂಗಾರಪ್ಪ ಬಂಗಾರಧಾಮವನ್ನು ರಾಜ್ಯದ ಪ್ರವಾಸಿ ತಾಣವನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ, ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಪಟ್ಟಣದಲ್ಲಿರುವ ಎಸ್.ಬಂಗಾರಪ್ಪ ಅವರ ಸಮಾಧಿ ಸ್ಥಳವಾದ ಬಂಗಾರಧಾಮಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್.ಬಂಗಾರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಇಂದಿಗೂ ಅವು ಜನಮಾನಸದಲ್ಲಿ ಸದಾಕಾಲ ನೆಲೆ ನಿಂತಿವೆ. ಅವರು ಜನರಿಗಾಗಿ ಮಾಡಿದ ಪುಣ್ಯದ ಕಾರ್ಯಗಳಿಂದಾಗಿ ಬಂಗಾರಧಾಮ ಪ್ರವಾಸಿ ತಾಣವಾಗಿ ರೂಪುಗೊಂಡಿದೆ ಎಂದರು.
ಉತ್ತಮ ಕ್ರೀಡಾಪಟುವಾಗಿದ್ದ ಕಾರಣ ಸದೃಢ ಆರೋಗ್ಯವನ್ನು ಹೊಂದಿ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಸಚಿವ ಮಧು ಬಂಗಾರಪ್ಪ ತಂದೆ ತಾಯಿಯರ ನೆನಪಿಗಾಗಿ ಸುಂದರವಾದ ಬಂಗಾರಧಾಮ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ, ತಾಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎ.ಡಿ.ಶೇಖರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ, ತಾಪಂ ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಪ್ರಭಾಕರ ಶಿಗ್ಗಾ, ಮುಖಂಡರಾದ ಪ್ರಕಾಶ್ ಹಳೇಸೊರಬ, ಸುರೇಶ್ ಬಿಳವಾಣಿ, ಸೇವಾದಳ ಶಿವಣ್ಣ ನಡಹಳ್ಳಿ, ಅಬ್ದುಲ್ ರಶೀದ್ ಹಿರೇಕೌಂಶಿ, ಸತ್ಯನಾರಾಯಣ ಹೊಸಬಾಳೆ, ಮೋಹನ್ ಕುಮಾರ್ ಜಡ್ಡಿಹಳ್ಳಿ, ಶ್ರೀಕಾಂತ್ ಚಿಕ್ಕಶಕುನ, ಅಯೂಬ್ ಖಾನ್, ಮಂಜುನಾಥ್ ತಲಗಡ್ಡೆ, ಪ್ರಶಾಂತ್ ಮೇಸ್ತಿç, ಶಿವಣ್ಣ, ಶೇಖರ್ ತ್ಯಾವಗೋಡು, ಪ್ರಸನ್ನಕುಮಾರ್, ಉಮಾಪತಿ, ಚಿನ್ನಪ್ಪ, ಜಿ.ಬಿ. ಶಿವಣ್ಣ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಓ ಶಶಿಧರ, ಬಿಸಿಎಂ ಅಧಿಕಾರಿ ಎಸ್. ಮೀನಾಕ್ಷಿ ಮೊದಲಾದವರು ಹಾಜರಿದ್ದರು.
ಯಾವುದೇ ಕ್ರಾಂತಿ ನಡೆಯುವುದಿಲ್ಲನವೆಂಬರ್ನಲ್ಲಿ ರಾಜ್ಯದಲ್ಲಿ ಯಾವುದೇ ಕ್ರಾಂತಿ ನಡೆಯುವುದಿಲ್ಲ. ಸರ್ಕಾರ ಸ್ಥಿರವಾಗಿದೆ. ಪಕ್ಷದ ಹೈಕಮಾಂಡ್ ತೀರ್ಮಾನ ಅಂತಿಮ. ಆದರೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಇವೆ. ತಾವು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷವು ತಮ್ಮನ್ನು ಗುರುತಿಸಿ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
;Resize=(128,128))
;Resize=(128,128))
;Resize=(128,128))