ಸಾರಾಂಶ
ಸರ್ಕಾರ ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ಮುಟ್ಟಿಸಲು ಜಾರಿಗೊಳಿಸಿದೆ ಅದಕ್ಕೆ ಅನುಷ್ಟಾನ ಸಮಿತಿಯನ್ನೂ ರಚಿನೆ ಮಾಡಿದ್ದು ಈ ಸಮಿತಿ ಪ್ರತಿ ತಿಂಗಳು ೫ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಅನುಷ್ಟಾನ ಸಮಿತಿ ಸದಸ್ಯರೊಂದಿಗೆ ಸಭೆ ಮಾಡಿ ಎಲ್ಲಿ ಲೋಪವಾಗಿ ಯಾವ ಕಾರಣಕ್ಕೆ ಅರ್ಹರಿಗೆ ಯೋಜನೆ ತಲುಪಿಲ್ಲ ಎಂಬುದನ್ನು ಪರಿಶೀಲಿಸಲಾಗುವುದು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಾಜ್ಯ ಸರ್ಕಾರದ ೫ ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ ೯೫ ರಷ್ಟು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಇದು ಬಡವರ ಪಾಲಿಗೆ ಆಶಾಕಿರಣವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಯಿಂದ ಬಡವರ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿದೆ ಎಂದರು.ಶೇ.100ರಷ್ಟು ತಲುಪಿಸಲು ಕ್ರಮ
ಕಳೆದ ಎರಡು ವರ್ಷಗಳಲ್ಲಿ ಎಲ್ಲ ೫ ಗ್ಯಾರಂಟಿ ಯೋಜನೆಗಳು ಶೇ ೯೫ರಷ್ಟು ಫಲಾನುಭವಿಗಳಿಗೆ ತಲುಪಿದೆ, ಉಳಿದ ೫ರಷ್ಟು ಜನರಿಗೆ ತಾಂತ್ರಿಕ ದೋಷಗಳಿಂದ ತಲುಪಿಲ್ಲ ಅದನ್ನೂ ಪೂರ್ಣಗೊಳಿಸಿ ಶೇ ೧೦೦ರಷ್ಟು ಜನರಿಗೂ ಯೋಜನೆಗಳನ್ನು ಮುಟ್ಟಿಸಲು ಸಮಿತಿ ಮುಂದಾಗಿದೆ. ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಲು ಇಲಾಖೆ ಅಧಿಕಾರಿಗಳ ಶ್ರಮ ಅತಿ ಮುಖ್ಯವಾಗಿರುತ್ತದೆ. ಸರ್ಕಾರ ಬಡವರನ್ನು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಮಾಡಲು ಈ ಯೋಜನೆಗಳನ್ನು ರೂಪಿಸಿದೆ.ಸರ್ಕಾರ ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ಮುಟ್ಟಿಸಲು ಜಾರಿಗೊಳಿಸಿದೆ ಅದಕ್ಕೆ ಅನುಷ್ಟಾನ ಸಮಿತಿಯನ್ನೂ ರಚಿನೆ ಮಾಡಿದ್ದು ಈ ಸಮಿತಿ ಪ್ರತಿ ತಿಂಗಳು ೫ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಅನುಷ್ಟಾನ ಸಮಿತಿ ಸದಸ್ಯರೊಂದಿಗೆ ಸಭೆ ಮಾಡಿ ಎಲ್ಲಿ ಲೋಪವಾಗಿ ಯಾವ ಕಾರಣಕ್ಕೆ ಅರ್ಹರಿಗೆ ಯೋಜನೆ ತಲುಪಿಲ್ಲ ಎಂಬುದನ್ನು ಪ್ರಗತಿ ಪರಿಶೀಲಿಸಲು ಈ ಸಭೆ ಪೂರಕವಾಗಿದೆ ಎಂದು ಹೇಳಿದರು.ಸ್ಮಾರ್ಟ್ ಮೀಟರ್ ಕಡ್ಡಾಯಗೃಹ ಜೋತಿ ಯೋಜನೆಯಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವವರಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಪಾಲಿಸಲು ಸರ್ಕಾರ ಮುಂದಾಗಿದೆ, ಆದರೆ ಇದನ್ನು ಪಾಲಿಸಿದರೆ ಬಡವರು ಮನೆ ನಿರ್ಮಾಣ ಕಸನಾಗಿಯೇ ಉಳಿಯಲಿದೆ ಎಂದು ಅರಿತು ಸರ್ಕಾರ ಕೆಲ ಮಾರ್ಪಾಡನ್ನು ತರಲು ಮುಂದಾಗಿದೆ, ಸ್ಥಳಿಯ ಸಮಸ್ಯೆಗಳನ್ನೂ ಸಹ ಸರ್ಕಾರದ ಗಮನಕ್ಕೆ ತರಲು ಸಭೆಯಲ್ಲಿ ಚರ್ಚಿಸಲಾಗಿದೆ, ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದು ಅದನ್ನು ಪಾಲಿಸಲು ಮುಂದಾಗಬೇಕು ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ತಾಲೂಕಿನಲ್ಲಿ ೪೧೬೯೧ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆ ತಲುಪುತ್ತಿದೆ, ಯುವನಿಧಿ ಯೋಜನೆಯಲ್ಲಿ ೬೩೬ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದು ಅವರಿಗೆಲ್ಲಾ ಈಗಾಗಲೇ ಮಾಸಿಕ ಹಣ ಸಂದಾಯವಾಗಿದೆ, ಗೃಹಲಕ್ಷ್ಮೀ ಯೋಜನೆಯಲ್ಲಿ ೪೨೩೭೧ ಗೃಹಿಣಿಯರಿಗೆ ಪ್ರತಿ ತಿಂಗಳು ೨ಸಾವಿರ ಹಣ ಪಾವತಿಯಾಗುತ್ತಿದೆ,ಇನ್ನೂ ಕೆಲವರಿಗೆ ಆಧಾರ್ ಸೀಡಿಂಗ್ ಆಗದ ಕಾರಣ ಹಣ ಪಾವತಿಯಾಗಿಲ್ಲವೆಂದು ತಿಳಿಸಿದರು.ಸಭೆಯಲ್ಲಿ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ತಫಿಕ್, ತಾಪಂ ಇಒ ರವಿಕುಮಾರ್, ಸದಸ್ಯರಾದ ಶಂಕರ್, ನಾರಾಯಣಸ್ವಾಮಿ, ಸಿಡಿಪಿಒ ಮುನಿರಾಜು, ಆಹಾರ ನಿರೀಕ್ಷಕ ಬಲರಾಮ್ ಸಿಂಗ್ ಇತರರು ಇದ್ದರು.